ಬುಡಕಟ್ಟು ಉತ್ಸವದಲ್ಲಿ ಸಾಗರದಂತೆ ಬಂದ ಯುವ ಸಮೂಹ, ಸಚಿವ ಬಿ. ಶ್ರೀರಾಮುಲು ಒತ್ತಾಸೆಯಂತೆ ಬುಡಕಟ್ಟು ಉತ್ಸವ ಯಶಸ್ವಿ

 

 

 

 

ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಸಾರಥ್ಯದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯ ಮಟ್ಟದ ಬುಡಕಟ್ಟು ಉತ್ಸವದಲ್ಲಿ  ಇಂದು ಜನಸಾಗರ ಹರಿದು ಸಚಿವ ಕನಸಿನಂತೆ ಯುವ ಸಮೂಹ ಬುಡಕಟ್ಟು ಸಂಸ್ಕ್ರತಿ ಮತ್ತು ಸಂಪ್ರಾದಾಯ ತಿಳಿಯಬೇಕು ಎಂದು ನಿನ್ನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ  ಆಸೆ ಪಟ್ಟಿದ್ದರು.

ಇಂದು ಸಾವಿರಾರು ಮಕ್ಕಳಿಂದ ಕೂಡಿದ್ದು  ಹಳೆ ಮಾಧ್ಯಮಿಕ‌ ಶಾಲಾ ಮೈದಾನ‌ ಕಿಕ್ಕಿರಿದು ಎಲ್ಲಿ ನೋಡಿದರು ಸಹ ಜನವೋ ಜನ ,ಬುಡಕಟ್ಟು ಉತ್ಸವಕ್ಕೆ ಹೊಸ ರೂಪ ಬಂದಿತ್ತು.

 

 

ಸಚಿವರು ಇಂತಹ ಬುಡಕಟ್ಟು ಉತ್ಸವಗಳು ನೋಡಲು ಬೇರೆ ರಾಜ್ಯಗಳಿಗೆ ಹೋಗಬೇಕು. ಆದರೆ ನಾನು ನನ್ನ ಜಿಲ್ಲೆಯ ಯುವ ಸಮೂಹಕ್ಕಾಗಿ ನನ್ನ ಉಸ್ತುವಾರಿ ಜಿಲ್ಲೆಗೆ ತಂದಿದ್ದೇನೆ ಎಂದಿದ್ದರು.

ಯುವಕ ಯುವತಿಯರು ಅಂತು ಸಿದ್ದಿ ನೃತ್ಯ, ಕರಡಿ ನೃತ್ಯಕ್ಕೆ ಒಂದು ರೀತಿ ಚಿತ್ರಗೀತೆಗೆ ಕೇಳಿದಂತೆ ಒನ್ಸ್ ಮೋರ್ ಎಂದರು. ಶಿಳ್ಳೆ ಕೇಕೆಗಳನ್ನು ಹಾಕಿ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡಿದರು.  ಕರಡಿ‌ ನೃತ್ಯ ಸಹ  ಕಣ್ಮನ ಸೆಳೆಯಿತು. ಸಾಕಷ್ಟು ಜನರು ಕಟುಂಬ ಸಮೇತವಾಗಿ ಬಂದು ಬುಡಕಟ್ಟು ಉತ್ಸವ ವಿಕ್ಷಿಸಿದ್ದು ತುಂಬಾ ವಿಶೇಷವಾಗಿತ್ತು. ಅದ್ಬತವಾದ ಕಾರ್ಯಕ್ರಮಕ್ಕೆ  ಇಂದು ಬುಡಕಟ್ಟು ಉತ್ಸ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ  ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ.ಬಸವನಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಮಂಜುನಾಥ್, ಸಚಿವ ಅಪ್ತ ಸಹಾಯಕ ಪಾಪೇಶ್ ನಾಯಕ ಮತ್ತು ಹನುಮಂತರಾಯಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

 

[t4b-ticker]

You May Also Like

More From Author

+ There are no comments

Add yours