ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಪಡೆಯುವುದು ಅಪರಾಧ: ಸಿವಿಲ್ ನ್ಯಾಯಧೀಶರಾದ ರೇಷ್ಮ ಕಲಕಪ್ಪ ಗೋಣಿ

 

 

 

 

ಚಳ್ಳಕೆರೆ: ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯುವ ಜೊತೆಗೆ ಮಕ್ಕಳನ್ನು ಬಾಲ್ಯವಿವಾಹ ಮಾಡಿದರೆ ಕಾನೂನು ಶಿಕ್ಷೆಗೆ ಗುರಿಯಾಗುತ್ತಿರ ಎಂದು  ಹಿರಿಯ ಸಿವಿಲ್ ನ್ಯಾಯಧೀಶರಾದ ರೇಷ್ಮ ಕಲಕಪ್ಪ ಗೋಣಿ ಹೇಳಿದರು.

 

 

ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ತಾಲುಕು ಕಾನೂನು ಸೇವ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ‌ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕೋವಿಡ್ ವ್ಯಾಕ್ಸಿನ್, ವರದಕ್ಷಿಣೆ, ಬಾಲ್ಯ ವಿವಾಹ ಕುರಿತು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಬಾಲ್ಯ ವಿವಾಹಗಳನ್ನು ಮಾಡಬಾರದು ಎಂದು ಅನೇಕ ಕಾನೂನು ಜಾರಿಗೊಳಿಸಲಾಗಿದೆ. ತಂದೆ ತಾಯಿಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದು ಕಾನೂನು ಉಲ್ಲಂಘನೆ ಅದಂತೆ ಎಂದರು. ಅವರಿಗೆ ಕಾನೂನು ಪ್ರಕಾರ ವಯಸ್ಸಿನಲ್ಲಿ ಮದುವೆ ಮಾಡಬೇಕು ಬಲವಂತವಾಗಿ ಮದುವೆ ಮಾಡಬಾರದು. ಸಾರ್ವಜನಿಕರು ಎಲ್ಲಾರು ಕಾನುನು ಪಾಲಿಸಬೇಕು. ವರದಕ್ಷಿಣೆಗಾಗಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆದರೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ. ಕಾನೂನಿನ ಪ್ರಕಾರ ವರದಕ್ಷಿಣೆ ಪಡೆಯುವುದು , ಕೊಡುವುದು ಅಪರಾಧ ಎಂದು ಭಾವಿಸಿಸಲಾಗಿದೆ. ಇಂತಹ  ಪ್ರಕರಣಗಳನ್ನು ತಡೆಯುವ ದೃಷ್ಟಿಯಿಂದ ಸರ್ಕಾರ ಸಾಕಷ್ಟು ಕಾನೂನು ಜಾರಿಗೆ ತಂದಿದೆ ಎಲ್ಲಾವನ್ನು ಜನರು ಅರ್ಥ ಮಾಡಿಕೊಂಡು ಕಾನೂನು ಪ್ರಕಾರ ಹೆಣ್ಣನ್ನು ಗೌರವಿಸಿ‌ ನಡೆಸಿಕೊಂಡು ಮೇಲು-ಕೀಳು ಎಂಬ ಭಾವನೆ ತೊಡೆದು ಹಾಕಿ ಸಮಾನ ‌ಬದುಕು  ರೂಪಿಸಿಕೊಳ್ಳುವ ಎಲ್ಲಾ ಅವಕಾಶವಿದೆ ಎಂದರು.
ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಯಾರು ಸಹ ಕೋವಿಡ್ ವ್ಯಾಕ್ಸಿನ್ ನಿಂದ ಹೊರಗುಳಿಯಬಾರದು. ಸರ್ಕಾರದ ಕೋವಿಡ್ ಅಭಿಯಾನಕ್ಕೆ‌ ಸಾಕಷ್ಟು ಜನರು ಸ್ವಯಂ ವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ಕಾಪಡಿಕೊಳ್ಳುತ್ತಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ 10 ಹಳ್ಳಿಗಳು 100% ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ.ಮುಂದಿನ ದಿನದಲ್ಲಿ ಎಲ್ಲಾ ಹಳ್ಳಿಗಳು ನೂರಕ್ಕೆ ನೂರರಷ್ಟು ಲಸಿಕೆ ಹಾಕಿಸಿದರೆ ಸರ್ಕಾರದ ಈ ಕಾರ್ಯ ಫಲಪ್ರದವಾದಂತೆ ಎಂದರು. ನಮ್ಮ ತಾಲೂಕು ಆಡಳಿತದ ಹೆಜ್ಜೆ ಕೋವಿಡ್ ವ್ಯಾಕ್ಸಿನ್ ಜೊತೆಗೆ ಸಮಸ್ಯೆ ಮುಕ್ತ ಹಳ್ಳಿಗಳ ಮಾಡುವ ಕತೆ ವಿಶೇಷ ಕಾರ್ಯಕ್ರಮ ಮೂಲಕ‌ ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ  ಗ್ರಾಮ ಅಧ್ಯಕ್ಷೆ ಜಯಮ್ಮ, ಪ್ರಧಾನ ನ್ಯಾಯಧೀಶರಾದ ಗೌಡ ಜಗದೀಶ್ ರುದ್ರೆ, ಅಪರ ಸಿವಿಲ್ ನ್ಯಾಯಧೀಶ ಮನು ಪಾಟೀಲ್ ಬಿ.ವೈ, ತಾಲೂಕು ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ಬಸಪ್ಪ,  ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಆನಂದಪ್ಪ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎನ್.ಪಾಲಯ್ಯ,  ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಕೆ.ಬಿ. ಪ್ರಭಾಕರ್ ಉಪನ್ಯಾಸ ನೀಡಿದರು.
[t4b-ticker]

You May Also Like

More From Author

+ There are no comments

Add yours