ಬಾಲಕಿಯರಿಗೆ ಆತ್ಮ ರಕ್ಷಣೆಗಾಗಿ ಓನಕೆ ಒಬವ್ವ ಕಲೆ:ಎಂಎಲ್ಸಿ ಕೆ.ಎಸ್.ನವೀನ್.

 

 

 

 

ಚಿತ್ರದುರ್ಗ ಫೆ. ೦೫
ಬಾಲಕಿಯರ ಆತ್ಮ ರಕ್ಷಣೆಗಾಗಿ ಸರ್ಕಾರ ಓನಕೆ ಒಬವ್ವ ಕಲೆ  ಕಾರ್ಯಕ್ರಮವನ್ನು ರೂಪಿಸಿದ್ದು, ಫೆ. ೬ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಫೆ. ೭ ರಂದು ಚಿತ್ರದುರ್ಗದಲ್ಲಿ ಉದ್ಘಾಟನೆಯಾಗಲಿದೆ  ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.

 

 

ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಾರಂಭಿಕವಾಗಿ ೧೦ನೇ ತರಗತಿ ಮೇಲ್ಪಟ್ಟ ಬಾಲಕಿಯರಿಗೆ ಈ ಕಲೆಯಲ್ಲಿ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ೧.೮೨ ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಚಿತ್ರದುರ್ಗದಲ್ಲಿ ಹಾಸ್ಟಲ್‌ನಲ್ಲಿನ ೫೦೦೦ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೂಡಿಸಲಾಗುವುದು. ಇದರಿಂದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ, ದೈಹಿಕವಾಗಿ ಗಟ್ಟಿಯಾಗುವಿಕೆ ಮತ್ತು ಆತ್ಮ ಸ್ಥರ್ಯವನ್ನು ತುಂಬುವ ಕಾರ್ಯ ಸರ್ಕಾರದವತಿಯಿಂದ ಆಗುತ್ತಿದೆ. ಈ ತರಬೇತಿಯನ್ನು ೬ನೇ ತರಗತಿಯ ವಿದ್ಯಾರ್ಥಿನಿಯರಿಂದಲೂ ನಿಡುವಂತೆ ಸರ್ಕಾರವನ್ನು ಒತ್ತಾಯ ಮಾಡಲಾಗಿದೆ ಎಂದು ನವೀನ್ ತಿಳಿಸಿದ್ದು, ಫೆ. ೭ ರಂದು ನಗರದ ಕೋಟೆಯ ಮೇಲಿರುವ ಓನಕೆ ಒಬವ್ವ ಸಮಾಧಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪೂಜೆಯನ್ನು ಸಲ್ಲಿಸಿ, ನಂತರ ನಗರದ ಜಿಲ್ಲಾಧಿಕಾರಿಗಳ ಕಛೇರಿ ಬಳಿಯ ಓನಕೆ ಒಬವ್ವ ಪ್ರತಿಮೆಯ ಬಳಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಇದೇ ಸಂದರ್ಭದಲ್ಲಿ ಓನಕೆ ಒಬವ್ವ ವೇಷಭೂಷಣವನ್ನು ಹಾಕಿಸಲಾಗುವುದು, ತದ ನಂತರ ಗೂಳಯ್ಯನ ಹಟ್ಟಿ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯಕ್ರಮಕ್ಕೆ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಚಾಲನೆ ನೀಡಲಿದ್ದಾರೆ ಎಂದರು.
ಈ ಬಾರಿಯ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಚಿತ್ರದುರ್ಗದಕ್ಕೆ ಸಿಹಿ ಸುದ್ದಿಯೊಂದು ಪ್ರಕಟವಾಗಲಿದೆ. ಅದು ಮೆಡಿಕಲ್ ಕಾಲೇಜಿರಬಹುದು, ದಾವಣಗೆರೆ ತುಮಕೂರು ನೇರ ರೈಲು ಮಾರ್ಗದ ಬಗ್ಗೆ ಸರ್ಕಾರದ ಪಾಲು ಬಿಡುಗಡೆ ಇರಬಹುದು ಎಂದು ವಿಷಯವನ್ನು ಗುಟ್ಟಾಗಿ ಇಡಲಾಗಿದೆ ಎಂದು ನವೀನ್ ತಿಳಿಸಿದರು.
ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಶಿವಣ್ಣಾಚಾರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಶೈಲಜಾ ರೆಡ್ಡಿ, ಶ್ರೀಮತಿ ಭಾರ್ಗವಿ ದ್ರಾವಿಡ್, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours