ಬಂಜಾರ ಜನಾಂಗ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶೇಷವಿದೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಬಂಜಾರ ಜನಾಂಗ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ ಹೀಗಾಗಿ ಎಲ್ಲಿ ಈ ಜನಾಂಗದ ಜನರಿರುವರು ಅಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಯೂರಿದೆ  ಎಂದು ತಹಶೀಲ್ದಾರ್  ಎನ್ ರಘುಮೂರ್ತಿ ಹೇಳಿದರು

ತಾಲೂಕಿನ ಮನಮೈನೆಟ್ಟಿ ಗ್ರಾಮದಲ್ಲಿ ಗೋದಿ ಹಬ್ಬದ ಪ್ರಯುಕ್ತ ಬಂಜಾರ ಸಮುದಾಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

ಸೇವಾಲಾಲ್ ಭಗವಾನರು ಈ ಸಮಾಜಕ್ಕೆ ಒಂದು ಐತಿಹಾಸಿಕವಾದ ಹಿನ್ನೆಲೆಯನ್ನು ಒದಗಿಸುತ್ತಾರೆ ಅವರ ಜೀವಿತ ಕಾಲದಲ್ಲಿ ಜನಾಂಗದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಸಮಾಜವನ್ನು ಮುನ್ನೆಲೆಗೆ ತೆಗೆದುಕೊಂಡು ಹೋದ  ಕೀರ್ತಿ ಅವರಿಗೆ ಸಲ್ಲುತ್ತದೆ.

ಇಂದು  ಪರಿಶಿಷ್ಟ ಜಾತಿ ಅವರಲ್ಲಿ ಈ ಜನಾಂಗ ಅತ್ಯಂತ ವೇಗವಾಗಿ ಸಾಮಾಜಿಕ ಬದಲಾವಣೆಯನ್ನು ಕಂಡಿದೆ ಇವತ್ತು ಈ ಜನಾಂಗವು ಹಳೆ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವುದರಿಂದ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ತಮ್ಮ ಮಕ್ಕಳನ್ನು ಪೈಪೋಟಿಗೆ ಅಣಿಗೊಳಿಸಿದ್ದಾರೆ. ಏನೇ ಆದರೂ ಸಂಪ್ರದಾಯವನ್ನು ಯಾವ ಜನಾಂಗವು ಮರೆಯಬಾರದು. ಇದರ ಜೊತೆಗೆ ಆಧುನಿಕ ಬದುಕಿಗೆ ಅಗತ್ಯವಾದ ಜ್ಞಾನವನ್ನು ಕೌಶಲ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಜನಾಂಗದವರು ತಮ್ಮ ಮಕ್ಕಳಿಗೆ ಅಗತ್ಯವಾದಂತಹ ಉನ್ನತ ಶಿಕ್ಷಣವನ್ನು ನೀಡುವ ಜೊತೆಗೆ ಆಧ್ಯಾತ್ಮಿಕ ಸ್ಪರ್ಶವನ್ನು ಒದಗಿಸಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಅಂತ ಶಿವಣ್ಣ ಭಾಜಪ ಮುಖಂಡರಾದ ಮೋಹನ್ ಗ್ರಾಮ ಪಂಚಾಯತಿ ಸದಸ್ಯರಾದ ಅಂತ ನಿರಂಜನ್ ವಿಷ್ಣು ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours