ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ: ಶಿಲ್ಪಿ ಆರ್.ಸುರೇಶಚಾರ್ಯ.

 

 

 

 

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಶಿಲ್ಪಿ ಆರ್.ಸುರೇಶಚಾರ್ಯ
ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ
*****
ಚಿತ್ರದುರ್ಗ,ಜನವರಿ.01:
ಐತಿಹಾಸಿಕ ದೇವಸ್ಥಾನಗಳೇ ಪ್ರವಾಸೋದ್ಯಮದ ಇಂದಿನ ಪ್ರಮುಖ ಆಕರ್ಷಣೆ. ಪ್ರವಾಸೋದ್ಯಮ ದೇಶಾದ್ಯಂತ ಅಭಿವೃದ್ಧಿಯಾಗಿದೆ ಎಂದರೆ ಅದು ವಿಶ್ವಕರ್ಮ ಸಮುದಾಯದ ಕೊಡುಗೆ ಎಂದು ಶಿಲ್ಪಿ ಸಿ.ಆರ್.ಸುರೇಶಚಾರ್ಯ ತಿಳಿಸಿದರು.
ಚಿತ್ರದುರ್ಗ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಬೆಳವಣಿಗೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯವಾಗಿದ್ದು, ಪ್ರವಾಸೋದ್ಯಮದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯ ಮೂಲವಾಗಿದೆ ಎಂದು ಹೇಳಿದರು.
ದೇಶದ ದೇವಸ್ಥಾನಗಳು ಶಿಲ್ಪಮಯವಾಗಿ, ಶಿಲ್ಪಶಾಸ್ತ್ರೋಕ್ತವಾಗಿ ಕಲಾಮಯವಾಗಿರಲು ಶಿಲ್ಪಿಗಳ ಪರಿಶ್ರಮವೇ ಕಾರಣ. ಇಂತಹ ಲಕ್ಷಾಂತರ ಶಿಲ್ಪಿಗಳಲ್ಲಿ ಅಗ್ರಸ್ಥಾನ ಪಡೆದವರು ಅಮರ ಶಿಲ್ಪಿ ಜಕಣಾಚಾರಿ. ಭಾರತ ದೇಶದಲ್ಲಿ ಸಹಸ್ರಾರು ಶಿಲ್ಪಿಗಳಿದ್ದರೂ, ಅಮರ ಶಿಲ್ಪಿ ಎಂದು ಶಿಲ್ಪಾಚಾರ್ಯ ಜಕಣಾಚಾರಿಯನ್ನು ಕರೆಯಲಾಗುತ್ತದೆ. ಕರುನಾಡಿನ ಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಏನೇ ಕಾರ್ಯಗಳು ನಡೆದರೂ ಅದು ವಿಶ್ವಕರ್ಮರಿಂದಲೇ, ದೇವತೆಗಳನ್ನು ನಿರ್ಮಾಣ ಮಾಡಿದವ ವಿಶ್ವಕರ್ಮ. ಇಡೀ ಸೃಷ್ಠಿಯ ಎಲ್ಲ ವಸ್ತುಗಳು ವಿಶ್ವಕರ್ಮ ಅವರಿಂದಲೇ ನಿರ್ಮಿತವಾಗಿವೆ. ಸೃಷ್ಠಿಯ ಎಲ್ಲ ಕಾರ್ಯಗಳಲ್ಲಿ ವಿಶ್ವಕರ್ಮ ಇದ್ದಾನೆ. ರೈತ ದೇಶದ ಬೆನ್ನೆಲುಬು ಎಂಬುದು ಜನಜನಿತವಾದದು. ಆದರೆ ರೈತನ ಬೆನ್ನೆಲುಬು ವಿಶ್ವಕರ್ಮ. ವಿಶ್ವಕರ್ಮ ರೈತರಿಗೆ ನೇಗಿಲು, ಕುಂಟೆ ನಿರ್ಮಿಸಿಕೊಡುವುದರ ಮೂಲಕ ರೈತನಿಗೆ ಉಳುಮೆ ಮಾಡಲು ಸಹಾಯಕವಾಗಿದ್ದಾನೆ ಎಂದರು.
ಅಪರ ಜಿಲ್ಲಾಧಿಕಾರಿ ಪರಶುರಾಮ್ ಶಿನ್ನಾಳಕರ್ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಮರಣದವರೆಗೂ ವಿಶ್ವಕರ್ಮ ಬೇಕು. ಎಲ್ಲರಿಗೂ ವಿಶ್ವಕರ್ಮ ಅತೀ ಅವಶ್ಯಕವಾಗಿ ಬೇಕು. ಸಮಾಜ ಹಾಗೂ ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.
ಇಡೀ ವಿಶ್ವದಲ್ಲಿಯೇ ಭಾರತದ ಸಂಸ್ಕøತಿ ಹಾಗೂ ವೈವಿಧ್ಯತೆಯನ್ನು ನೋಡಿದಾಗ ಅದಕ್ಕೆ ಮೂಲ ಕಾರಣಕರ್ತರು ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ಅಮರ ಶಿಲ್ಪಿ ಜಕಣಾಚಾರಿ ಅವರು ನಿಸ್ವಾರ್ಥದಿಂದ ಕಲಾ ಸೇವೆ ಮಾಡಿ, ಶಿಲ್ಪಕಲೆ, ವಾಸ್ತುಶಿಲ್ಪವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಪಿ.ತಿಪ್ಪೇಶಾಚಾರ್ಯ ಮಾತನಾಡಿ, ಹಿಂದೂ ಧರ್ಮದ ಎಲ್ಲ ಸಮುದಾಯಗಳಿಗೂ ವಿಗ್ರಹ, ಮೂರ್ತಿ, ದೇಗುಲಗಳ ಅತ್ಯಗತ್ಯವಾಗಿ ಬೇಕು. ಇವುಗಳನ್ನು ನಿರ್ಮಾಣ ಮಾಡುವ ಮಹಾನ್ ವ್ಯಕ್ತಿಗಳು ಶಿಲ್ಪಾಚಾರ್ಯರು. ಇದು ನಿಜಕ್ಕೂ ಸಂತೋಷದ ಸಂಗತಿ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ವಿವಿಧೆತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶಕ್ಕೆ ವಿಶ್ವಕರ್ಮ ಸಮಾಜವು ಅಪಾರವಾದ ಕೊಡುಗೆ ನೀಡಿದೆ. ದೇವಾಲಯಗಳು, ವಿಗ್ರಹಗಳು, ಪೂಜೆಗೆ ಅರ್ಹವಾದ ಮೂರ್ತಿಗಳನ್ನು ವಿಶ್ವಕರ್ಮ ಸಮುದಾಯ ನಿರ್ಮಾಣಮಾಡಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ವಿಶ್ವಕರ್ಮ ಸಮಾಜ ಅಧ್ಯಕ್ಷ ಎ.ಶಂಕರಾಚಾರ್, ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನಾಚಾರ್, ಪಿ.ಮಂಜುನಾಥಾಚಾರ್, ಪ್ರಧಾನ ಕಾರ್ಯದರ್ಶಿ ನಾರಾಯಣಚಾರ್, ಕಾರ್ಯದರ್ಶಿ ವಿ.ಗಂಗಾಧರ್‍ಚಾರ್, ಕಾಳಿಕಾಂಬ ಸಮಿತಿ ಕಾರ್ಯದರ್ಶಿ ಗೋವರ್ಧನ್, ಕೆ.ಶಿವಣ್ಣಚಾರ್, ಮಹಿಳಾ ಘಟಕದ ಎಸ್.ವಿಜಯಕುಮಾರ್, ನಗರಸಭೆ ನಾಮನಿರ್ದೇಶನ ಸದಸ್ಯ ರಮೇಶಾಚಾರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಮೊಳಕಾಲ್ಮುರಿನ ಕಲ್ಲೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಗಂಗಾಧರ್ ನಿರೂಪಿಸಿದರು.

 

 

 

[t4b-ticker]

You May Also Like

More From Author

+ There are no comments

Add yours