ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸುತ್ತಿರುವ ಮನೆಯ ವಂತಿಕೆ ಕಟ್ಟಲು ಕಾಲಾವಕಾಶ ನೀಡಲು ಮನವಿ

 

 

 

 

ಚಿತ್ರದುರ್ಗ:  ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯ ಅಪೋರ್ಡೆಬಲ್ ಹೌಸಿಂಗ್ ಪಾರ್ಟ್‌ನರ್‌ಶಿಪ್ (ಎ.ಹೆಚ್.ಪಿ) ಜಿ+2 ಮಾದರಿಯಲ್ಲಿ ಚಿತ್ರದುರ್ಗ ನಗರಸಭೆಯ ಮೇಗಲಹಳ್ಳಿ ರಿ.ಸ, ನಂ: 22 ರಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಲ್ಲಿ ಒಂದು ಮನೆಯ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚ ರೂ 6.30 ಲಕ್ಷಗಳಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವರ್ಗದ ಜನಾಂಗಕ್ಕೆ ಕೇಂದ್ರ ಸರ್ಕಾರದಿಂದ ರೂ 1.50 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ 2.00 ಲಕ್ಷ ಒಟ್ಟು ರೂ 3.50 ಲಕ್ಷಗಳ ಸಹಾಯಧನವನ್ನು ಮತ್ತು ಸಾಮಾನ್ಯ ವರ್ಗ: ಹಿಂದುಳಿದ ವರ್ಗ ಅಲ್ಪ ಸಂಖ್ಯಾತರುಗಳಿಗೆ ಕೇಂದ್ರ ಸರ್ಕಾರದಿಂದ ರೂ 1.50 ಲಕ್ಷ ಹಾಗೂ ರಾಜ್ಯಸರ್ಕಾರದಿಂದ ರೂ 1.20 ಲಕ್ಷಗಳು ಒಟ್ಟು ರೂ 2.70 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತಿದೆ. ಮುಂದುವರೆದು ಒಂದು ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ ರೂ 6.30 ಲಕ್ಷ ಸದರಿ ಮೊತ್ತದ ಶೇಕಡ 10% ರಷ್ಟು ಅಂದರೆ ರೂ 63 ಸಾವಿರ ರೂಪಾಯಿಗಳನ್ನು ವಂತಿಕೆ ರೂಪದಲ್ಲಿ ಫಲಾನುಭವಿಯು ಭರಿಸಬೇಕಾಗಿರುತ್ತದೆ. ಅದರಂತೆ ಎಸ್.ಬಿ.ಐ ಜೆ.ಸಿ.ಆರ್ ಶಾಖೆ, ಚಿತ್ರದುರ್ಗ ಖಾತೆ ಸಂಖ್ಯೆ: 40287009632 ಗೆ ರೂ 10.000/- ಗಳನ್ನು ಕಟ್ಟಿದ ಫಲಾನುಭವಿಗಳು ಉಳಿದ 53 ಸಾವಿರ ರೂಗಳನ್ನು ಮತ್ತು ಇದುವರೆಗೂ ಕಟ್ಟದೆ ಇರುವ ಫಲಾನುಭವಿಗಳು ರೂ 63 ಸಾವಿರ ರೂಗಳನ್ನು ಕಟ್ಟಲು ದಿನಾಂಕ:27-12-2021 ರಿಂದ ದಿನಾಂಕ: 14-01-2022 ರವರೆಗೆ ಕಾಲಾವಕಾಶ ನಿಗಧಿಪಡಿಸಲಾಗಿರುತ್ತದೆ. ಸದರಿ ಆವಧಿಯೊಳಗೆ ಫಲಾನುಭವಿಯು ವಂತಿಕೆ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಅನರ್ಹರೆಂದು ಪರಿಗಣಿಸಿ, ರದ್ದುಪಡಿಸಲಾಗುವುದು ಎಂದು ತಿಳಿಯಪಡಿಸಿದೆ. ಈ ವಿಚಾರವಾಗಿ ಕಳೆದ ತಿಂಗಳಲ್ಲಿ 10 ಸಾವಿರ ಡಿಡಿ ಯನ್ನು ಕಟ್ಟಲು ಬಡ, ನಿರ್ಗತಿಕ, ಕೂಲಿ ಕೆಲಸ ಮಾಡುತ್ತಿರುವ ಜನರು ಈ ಕೊರೋನ ಸಂದರ್ಭದಲ್ಲೂ ಸಹ ತುಂಬಾ ಕಷ್ಟ ಪಟ್ಟು ಸಾಲ ಮಾಡಿಕೊಂಡು ನಗದನ್ನು ಪಾವತಿಸಿರುತ್ತಾರೆ, ಆದಾಗ್ಯೂ ಸಹ ಗಾಯದ ಮೇಲೆ ಬರೆ ಎಳೆದಂತೆ ಕೇವಲ 18 ದಿನಗಳ ಗಡುವು ನೀಡಿ 53 ಸಾವಿರ ರೂಗಳ ಹಣವನ್ನು ಪಾವತಿಸಲು ನಗರಸಭಾ ಪೌರಾಯುಕ್ತರು ಆದೇಶ ಹೊರಡಿಸಿರುತ್ತಾರೆ. ಈ ಕೊರೋನ ಮತ್ತು ಒಮೀಕ್ರಾನ್ ನಂತಹ ಸಾಂಕ್ರಾಮಿಕ ರೋಗಗಳು ಅತಿ ಹೆಚ್ಚಾಗಿ ಮತ್ತು ವೇಗವಾಗಿ ಹರಡುತ್ತಿರುವ ಜೀವನ ನಡೆಸಲು ಕಷ್ಟಕರವಾಗಿರುವ ಸಂದರ್ಭದಲ್ಲಿ ಹಾಗೂ ವಾರಾಂತ್ಯ 02 ದಿನಗಳ ಕಫ್ಯೂ ಇರುವ ಸ್ಥಿತಿಯಲ್ಲಿ ಜನ ಮೂರು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇರುವಾಗ ನಗರ ಸಭಾ ಕಾರ್ಯಾಲಯದ ಪೌರಾಯುಕ್ತರು ನೀಡಿರುವ ಗಡುವು ಬಡ ಹಾಗೂ ಕೂಲಿ ಕಾರ್ಮಿಕರಿಗೆ ನುಂಗಲಾರ ಆತಂಕ ಭರಿತ ಪರಿಸ್ಥಿತಿಯನ್ನು ಸೃಷ್ಠಿಸಿದೆ.
ದಯಮಾಡಿ ಬಡಜನರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 53 ಸಾವಿರ ರೂಗಳ ನಗದನ್ನು ಪಾವತಿಸಲು 03 ತಿಂಗಳುಗಳ ಕಾಲಾವಕಾಶವನ್ನು ನೀಡುವಂತೆ ಸೂಚಿಸಲು ಚಿತ್ರದುರ್ಗ ಬಡಜನರ ಪರವಾಗಿ ರಾಷ್ಟ್ರೀಯ ಪ್ರಬುದ್ದ ಸೇನೆ  ಒತ್ತಾಯಿಸಿದೆ.

 

 

[t4b-ticker]

You May Also Like

More From Author

+ There are no comments

Add yours