ಪ್ರಗತಿಯ ತೀವ್ರತೆ ಹೆಚ್ಚಿಸಲು, ಸಮಸ್ಯೆಗಳ ಇತ್ಯರ್ಥಕ್ಕೆ ಆಡಳಿತಧಿಕಾರಿಯಾಗಿ ಎಸ್.ಕೆ.ಬಸವರಾಜನ್ ನೇಮಕ: ಮುರುಘಾ ಶ್ರೀ

 

 

 

 

ಚಿತ್ರದುರ್ಗ: ಮುರುಘಾ ಶ್ರೀ, ಮಾಜಿ ಶಾಸಕ ಎಸ್ ಕೆ ಬಸವರಾಜನ್ ಮುನಿಸು ಶಮನ.

ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶ್ರೀಗಳ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿ ಮುರುಘಾ ಮಠಕ್ಕೆ ಮುರುಘಾ ಶರಣರು ಸೇರಿ 20,ಮಠಾದೀಶರು ಮತ್ತು ಪೀಠಾದೀಶರು ಆಗಿಹೋಗಿದ್ದಾರೆ. ಒಬ್ಬೊಬ್ಬರು ಒಂದೊಂದು ಉಜ್ವಲ ಕೊಡುಗೆಯನ್ನು  ನೀಡಿದ್ದಾರೆ.ಇಂತದರ ಪ್ರಯತ್ನವನ್ನ 21 ಶತಮಾನದಲ್ಲಿ ಮಾಡುತ್ತಿದ್ದೇವೆ.

ಕಳೆದ 14 ವರ್ಷಗಳಿಂದ ಎಲ್ಲಾ ಕಡೆಗಳಲ್ಲಿ  ಮುರುಘಾ ಮಠದ ಕೀರ್ತಿ ಹಬ್ಬುವಂತೆ ಮಾಡಿದ್ದೇವೆ. ನಾವುಗಳು ಎಲ್ಲಾ ಆಡಳಿತವನ್ನ ಕೇಂದ್ರೀಕರಿಸಿ ಸೆಂಟ್ರಲೈಸ್ ಮಾಡಿದ್ದೇವೆ.ಚಿಕ್ಕ ಮಳೆಯಿಂದ ಎಲ್ಲವನ್ನ ಖರೀದಿಸುವಲ್ಲಿ ಶ್ರೀಗಳು ಮಾಡಿದ್ದಾರೆ. ಸ್ವಾಮಿಗಳೇ ಎಲ್ಲವನ್ನು ನಿರ್ವಹಿಸುವ ಭಾವನೆಯನ್ನ ಜನ ಹೊಂದಿದ್ದರು.ಅದನ್ನ ನಾವು ಚಾಚು ತಪ್ಪದೆ ನಿರ್ವಹಿಸಿದ್ದೇವೆ.

ಈ ಎಲ್ಲ ಅಭಿವೃದ್ದಿ ಮಾಡಿದಾಗಲೂ ಆತಂಕ, ಅನುಮಾನಗಳಿದ್ದವು.ಅದೆಲ್ಲದರ ಜೊತೆ ಕೋರ್ಟ್ ಕಾನೂನು ಸಮರಗಳಿದ್ದವು.ಅವುಗಳು ನಮಗೆ ಹಿನ್ನಡೆ ಮಾಡುತ್ತಿದ್ದವು.ರಾಗ ದ್ವೇಶಗಳು ಶಾಶ್ವತವಲ್ಲ, ಯಾರೂ ಹಾಗೆ ಭಾವಿಸಬಾರದು.ಈ ಶರೀರ, ಜೀವನ ಬಂದಿರೋದು ರಾಗ,ದ್ವೇಶಗಳಿಗಲ್ಲ.ರಾಗದ್ವೇಶದ ಸಾಧನೆಗಿಂತ ಪರಸ್ಪರ ಪ್ರೀತಿ ಸಾಧನೆ ಮಾಡಬೇಕು.

ನ್ಯಾಯಾಂಗ, ವಕೀಲರು, ಕೋರ್ಟಿಗೆ ಹೆಚ್ಚು ಸಮಯ ಕಳೆಯುವುದು ನಮಗೆ ಹಿನ್ನಡೆ. ಇದರಿಂದ ಎಲ್ಲವಕ್ಕೂ ಶಾಶ್ವತ ಇತಿ ಶ್ರೀ ಆಡಬೇಕಿದೆ.

ಬಹಳಷ್ಟು ಜನರಿಗೆ ಮಠ ಸುಲಲಿತ, ಸುರಕ್ಷಿತವಾಗಿ ಇದೆ ಈಗ ಇದು ಬೇಕಿತ್ತಾ ಎನ್ನುವಂತಾಗಿದೆ. ಇಲ್ಲಿ ಅನುಭವಿಸುವವರಿಗೆ ಗೊತ್ತು ಸಮಸ್ಯೆಗಳು ಏನೇನಿವೆ ಎಂದು.

ಈ ಮಠವನ್ನ ಮತ್ತಷ್ಟು ಪ್ರಗತಿಯ ಹಾದಿಯಲ್ಲಿ ನಡೆಸಬೇಕಿದೆ.ಅಪೂರ್ಣವಾಗಿರುವ ಮಠದ ಎಲ್ಲಾ ಯೋಜನೆಗಳ ಪೂರ್ಣ ಮಾಡಬೇಕಿದೆ.

ಈ ದಿಸೆಯಲ್ಲಿ ಬದಲಾವಣೆ ವ್ಯಕ್ತಿಯ ಬದಲಾವಣೆ ಸ್ವೀಕರಿಸಬೇಕಾಗಿದೆ..

 

 

ಪ್ರಗತಿಯ ತೀವ್ರತೆ ಹೆಚ್ಚಿಸಲು, ಸಮಸ್ಯೆಗಳ ಇತ್ಯರ್ತ ಪಡಿಸಲು ಈ ತೀರ್ಮಾನ.

ಎಸ್ ಕೆ ಬಸವರಾಜನ್ ರನ್ನ ಶ್ರೀಮಠದ ಆಡಳಿತಾಧಿಕಾರಿ, SJM ವಿದ್ಯಾಪೀಠದ ಕಾರ್ಯದರ್ಶಿಯಾಗಿ ಮಾಡಲಾಗಿದೆ.

ಪ್ರತಿಯೊಂದು ವಿಚಾರವನ್ನು ನಮ್ಮೊಂದಿಗೆ ಸಮಾಲೋಚನೆ ಮಾಡಬೇಕು.ಅಂತಿಮ ನಿರ್ಧಾರ ಮುರುಘಾ ಶ್ರೀಗಳದ್ದಾಗಿರುತ್ತದೆ. ಆಡಳಿತದಲ್ಲಿ ಕುಟುಂಬ, ಸುತ್ತ ಇರುವವರನ್ನ ಸೇರಿಸಬಾರದು.ಗುಂಪುಗಾರಿಕೆ, ಸ್ವಜನ ಪಕ್ಷಪಾತಕ್ಕೆ ಅವಕಾಶ ಕಲ್ಪಿಸಬಾರದು.ಶ್ರೀಮಠ ಹಾಗೂ ಶ್ರೀಗಳ ಬಗ್ಗೆ ಯಾವ ಸಮಸ್ಯೆ ಸೃಷ್ಠಿಸಬಾರದು.ಶ್ರೀಮಠವನ್ನ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಎಸ್.ಕೆ. ಬಸವರಾಜನ್ ಬಳಿ ಚರ್ಚೆ ಮಾಡಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ಮುರುಘಾಮಠದ   ನೂತನವಾಗಿ  ಆಡಳಿತಧಿಕಾರಿ ಮತ್ತು ಎಸ್ ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನೇಮಕಗೊಂಡ ಎಸ್.ಕೆ.ಬಸವರಾಜನ್ ಮಾತನಾಡಿ ಸ್ವಾಮೀಜಿ ಮತ್ತು ನಾವು ಸೇರುವ ಕಾಲ ಕೂಡಿ ಬಂದಿದೆ, ಅವರಲ್ಲಿ ನಮ್ಮಲ್ಲಿದ್ದ ತಪ್ಪು ಕಲ್ಪನೆ ತಿಳಿಯಾಗಿದೆ.

ನನಗೆ ಒಂದು ಅವಕಾಶ ಸಿಕ್ಕಿದೆ, ನಿರುದ್ಯೋಗಿ ಆಗಿದ್ದವನಿಗೆ ಉದ್ಯೋಗ ಸಿಕ್ಕಿದೆ.ನಾನಗೆ ಹಿಂದೆ ಈ ಹುದ್ದೆ ನಿರ್ವಹಿಸಿದ ಅನುಭವ, ಸಂಸ್ಥೆ ಬಗ್ಗೆ ಗೌರವವಿದೆ.ಪೂಜ್ಯ ಸ್ವಾಮೀಜಿಗಳು ನನಗೆ ಅವಕಾಶ ಕೊಟ್ಟಿದ್ದಾರೆ.ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.ಈ ಕಾರ್ಯಕ್ಕೆ ಸಾರ್ವಜನಿಕರು, ಮಠಾದೀಶರು, ಸಿಬ್ಬಂಧಿಗಳ ಸಹಕಾರ ಕೇಳುತ್ತೇನೆ.ಸಮಯ ಬಂದಾಗ ಎಲ್ಲವೂ ಸಾಧ್ಯವಾಗುತ್ತದೆ.ನಮ್ಮ ಮನಸುಗಳು ತಿಳಿಯಾಗಿದೆ ಇಬ್ಬರೂ ಕೂಡಿಕೊಂಡಿದ್ದೇವೆ.ನಮ್ಮಿಬ್ಬರ ವೈಮನಸ್ಸು ಇವತ್ತು ಇಲ್ಲ, ಸಂಸ್ಥೆಯ ಹಿತ ದೃಷ್ಟಿಯಿಂದ ಇಬ್ಬರು ಮರೆತಿದ್ದೇವೆ.ಅವರೇ ಕರೆದು, ಪರಸ್ಪರ ಮಾತಾಡಿ, ಕೈಯಾರೆ ಆದೇಶ ಪತ್ರ ಬರೆದು ಕೊಟ್ಟಿದ್ದಾರೆ.

ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರೀ ಮಠದ ಅಭಿವೃದ್ದಿ ಕಾರ್ಯಗಳ ನಿರ್ವಹಣೆ ಮಾಡುವೆ. ನಮ್ಮಿಬ್ಬರ ವೈಮನಸ್ಸು 14 ವರ್ಷಕ್ಕಾದರೂ ಮುಗಿಯಿತಲ್ಲ.

24 ವರ್ಷ ಆಗೋದೆ, 14. ವರ್ಷಕ್ಕೆ ಮುಗಿಯಿತಲ್ಲ ಎಂಬ ಸಂತೋಷ.ನಮ್ಮ ಮನಸ್ಸುಗಳು ತಿಳಿಯಾಗಿವೆ, ಕೆಲಸಗಳ ಒತ್ತಡಗಳಿವೆ.ಅಲ್ಲಿಗೆ ಅನುಭವ ಇರುವ ಪ್ರಾಮಾಣಿಕರು ಬೇಕಾಗಿದ್ದಾರೆ.ಅದಕ್ಕಾಗಿ ನಮ್ಮನ್ನ ಕರೆದಿದ್ದಾರೆ.

ಈ  ಮೊದಲು ಸಹ ಈ ಎರಡೂ ಸ್ಥಾನಗಳನ್ನು ನಿಭಾಯಿಸಿದ್ದೆ ಆಡಳಿತಾತ್ಮಕ ದೃಷ್ಠಿಯಿಂದ ನನಗೆ ಸ್ಥಾನಮಾನ ನೀಡಿದ್ದಾರೆ.ಅನುಭವದ ಆಧಾರದ ಮೇಲೆ ಮತ್ತೆ ಸ್ಥಾನ ನೀಡಿದ್ದಾರೆ ತಮ್ಮ ಮನದಾಳದ‌ ಮಾತು ಹಂಚಿಕೊಂಡರು.

[t4b-ticker]

You May Also Like

More From Author

+ There are no comments

Add yours