ಪಿಎಂ ಕಿಸಾನ್ ಯೋಜನೆಯಡಿ ದೇಶದ ರೈತರಿಗೆ 10ನೇ ಕಂತಿನ ಹಣ ಬಿಡುಗಡೆ

 

 

 

 

ಬೆಂಗಳೂರು,ಜ.1- ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯಡಿ ದೇಶದ ರೈತರಿಗೆ 10ನೇ ಕಂತಿನ ಹಣ ಬಿಡುಗಡೆಗೊಳಿಸಿದ್ದು, ಈ 10ನೇ ಕಂತಿನಡಿ ಕರ್ನಾಟಕ ರಾಜ್ಯದ ಒಟ್ಟು 3426401ರೈತರಿಗೆ 685 ಕೋಟಿ 28 ಲಕ್ಷ 2 ಸಾವಿರ ರೂ.

ಹಣ ಬಿಡುಗಡೆಯಾಗಿದೆ.

 

 

2018-19 ರಿಂದ ಜ.1, 2022 ರವರೆಗೆ 10 ನೇ ಕಂತಿನವರೆಗೆ ರಾಜ್ಯದ ಒಟ್ಟು 54 ಲಕ್ಷದ 52ಸಾವಿರ ರೈತ ಕುಟುಂಬಗಳಿಗೆ ಒಟ್ಟು 8707 ಕೋಟಿ 97ಲಕ್ಷ ರೂ.ಮೊತ್ತ ಬಿಡುಗಡೆಯಾದಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ ಯೋಜನೆಯನ್ನು ಕಳೆದ 2019 ಫೆ.1ರಿಂದ ಅನುಷ್ಠಾನಗೊಳಿಸಿದ್ದು, ಯೋಜನೆಯಡಿ ವಾರ್ಷಿಕ ರೂ 6000 ರೂ.ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ.ಈ ಅನುದಾನವನ್ನು ರೂ .2000 ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಇದನ್ನು ನೀಡಲಾಗುತ್ತಿದೆ.

2850 ಕೋಟಿ 54 ಲಕ್ಷ ರೂ.ಗಳಷ್ಟು ಕರ್ನಾಟಕ ಸರ್ಕಾರದಿಂದ ಹೆಚ್ಚುವರಿಯಾಗಿ ರೈತರಿಗೆ ಹಣ ಪಾವತಿಯಾಗಿದೆ. ಸಾಧ್ಯವಾದಷ್ಟು , ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಸೂಚಿಸಲಾಗಿದ್ದು, ಎಲ್ಲಾ ರಾಜ್ಯಗಳ ಪೈಕಿ , ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2021ರ ವರ್ಷದ ಫೆಬ್ರುವರಿಯಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ದೊರೆತಿದೆ.

ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ರಾಜ್ಯದಿಂದ ಆಗಿದಾಗ್ಗೆ ಪರಿಶೀಲಿಸಲಾಗುತ್ತಿದೆ.

[t4b-ticker]

You May Also Like

More From Author

+ There are no comments

Add yours