ಪಾಲಕ್ ಸೊಪ್ಪಿನ ಸೇವನೆ ಆರೋಗ್ಯಕ್ಕೆ….

 

 

 

 

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ Spinach ಎಂದು ಕರೆಯಲ್ಪಡುವ ಪಾಲಾಕ್ ಸೊಪ್ಪಿನಲ್ಲಿ ಪ್ರೋಲೇಟ್, ಕ್ಯಾರೋಟಿನೈಡ್, ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಮೊಡವೆ ಸಮಸ್ಯೆ, ದೃಷ್ಟಿ ಹಿನತೆ, ಅಧಿಕ ರಕ್ತದೊತ್ತದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು.

 

 

ಹಾಗಿದ್ದರೆ ಪಾಲಕ್ ಸೊಪ್ಪಿನ ಉಪಯೋಗಳೇನು ಎಂಬುದನ್ನು ತಿಳಿಯೋಣ. ದೇಹದ ಆರೋಗ್ಯಕ್ಕೆ ತರಕಾರಿ ಮತ್ತು ಸೊಪ್ಪುಗಳು ಸಹಾಯಕಾರಿ. ಅದರಲ್ಲೂ ರಾಜಾ ಪಾಲಕ್ ಸೊಪ್ಪು ಅಮೃತಗಳ ಸಮಾನವಾಗಿದ್ದು,ಇದನ್ನು ಸಸ್ಯಾಹಾರಿಗಳ ಸಂಜೀವಿನಿ ಎಂದೇ ಕರೆಯಲಾಗುತ್ತದೆ. ಈ ಸೊಪ್ಪಿನಲ್ಲಿ ‘ಪ್ರೋಲೇಟ್’ ಅನ್ನೋ ಅಂಶವಿದ್ದು, ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೇ ಈ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ.

  • ಮುಖದ ಒಂದು ಕಡೆಗೆ ಪಾಲಾಕ್ ಸೊಪ್ಪನ್ನು, ಇನ್ನೊಂದು ಕಡೆಗೆ ಸೋಪನ್ನು ಹಾಕಿ ಬಿಡಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಮುಖದಲ್ಲಿ ನೆರಿಗೆ ಬರುವುದು, ಸುಕ್ಕಾಗುವುದು, ಎಲ್ಲವನ್ನು ಪಾಲಾಕ್ ಸೊಪ್ಪು ತಡೆಯುತ್ತದೆ.
  • ಪಾಲಾಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯವನ್ನೂ ಇದು ವೃದ್ಧಿಸುತ್ತದೆ.
  • ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅನಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ
  • ಈ ಸೊಪ್ಪಿನಲ್ಲಿ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನೂ ದೂರಾಗಿಸುತ್ತದೆ.
  • ಪಾಲಾಕ್ ಸೊಪ್ಪನ್ನು ತಿಂದರೆ ನರಗಳಿಗೆ ಶಕ್ತಿ ಬರುತ್ತದೆ ಹಾಗೆಯೇ ಜ್ಞಾಪಕಶಕ್ತಿಯನ್ನು ಹೆಚ್ಚಾಗುತ್ತದೆ.
  • ಮಕ್ಕಳಿಗೆ ಪಾಲಾಕ್ ಸೊಪ್ಪು ಕೊಟ್ಟರೆ ದೃಷ್ಟಿದೋಷದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
  • ದೇಹದಲ್ಲಿ ರಕ್ತದ ಕೊರತೆಯಾಗುವುದರಿಂದ ಎಲ್ಲಾ ರೋಗಗಳಿಗೆ ಆಹ್ವಾನ ನೀಡುತ್ತದೆ. ನಿತ್ಯ ಪಾಲಾಕ್ ಸೊಪ್ಪು ತಿಂದರೆ ಈ ಸಮಸ್ಯೆಯಿಂದ ಬಹುಬೇಗ ಮುಕ್ತಿ ಪಡೆಯಬಹುದು.
[t4b-ticker]

You May Also Like

More From Author

+ There are no comments

Add yours