ನೂರಾರು ಬೇರು ಗಿಡಮೂಲಿಕೆಯಲ್ಲಿ ಮಕ್ಕಳ ಬೇರಿನ ಉಪಯೋಗವೇನು ನೋಡಿ

 

 

 

 

 

ಸಂಸ್ಕೃತದಲ್ಲಿ ಶತಾವರಿ ಎಂದರೆ ನೂರಾರು ಬೇರುಗಳು ಮತ್ತು ಕೂದಲ ತರಹ ಬೇರುಗಳು ಎಂಬ ಅರ್ಥವಿದೆ. ಈ ಗಿಡ ಮುಳ್ಳಿನಿಂದ ಕೂಡಿ, ನೀಳವಾಗಿ ಬೆಳೆಯುತ್ತ ಅಥವಾ ಬಳ್ಳಿಯಂತೆ ಹರಡುತ್ತೆ. ಇದಕ್ಕೆ ಕನ್ನಡದಲ್ಲಿ ಹಲವು ಮಕ್ಕಳ ಬೇರು/ತಾಯಿ ಎಂದು ಕರೆಯುವರು. ಇದಕ್ಕೆ ಎದೆಹಾಲು ವೃದ್ಧಿಪಡಿಸುವ ಗುಣವಿದೆ. ಅಲ್ಲದೆ ಇದಕ್ಕೆ ವೀರವರ್ಧನೆ, ನೇತ್ರ ರಕ್ಷಣೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ, ಪುಷ್ಟಿದಾಯಕ, ಬಲಕಾರಕ ಗುಣಗಳಿದ್ದು ವಾತರೋಗಗಳು, ಎದೆಹಾಲು ಕೊರತೆ, ಜಠರದ ಹುಣ್ಣು, ಪಿತ್ತರೋಗಗಳಲ್ಲಿ ಉತ್ತಮ. ಉಪಯೋಗಗಳು

೧. ಚೂರ್ಣ ೧ ಟೀ ಚಮಚ ಸಾಕಷ್ಟು ಹಾಲು ಮತ್ತು ಜೇನು ಸೇರಿಸಿ ದಿನಕ್ಕೆ ಒಂದು

ಬಾರಿ ಸೇವಿಸಲು ಪ್ರುಷ್ಟಿದಾಯಕವಾಗಿ, ಬಲಕಾರಕವಾಗಿ, ಗರ್ಭಿಣಿಯರಲ್ಲಿ ಉತ್ತಮ ಸಂತಾನಕ್ಕಾಗಿ

 

 

೨. ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ಬೇರಿನಲ್ಲಿ ಜಠರದ ಹುಣ್ಣನ್ನು ವಾಸಿ ಮಾಡುವ ಗುಣವನ್ನು ಹೊಂದಿದೆ ಹಾಗೂ ಎದೆ ಉರಿ ಮತ್ತು ಆಮ್ಲಪಿತ್ರಗಳಲ್ಲಿ ಫಲಕಾರಿ. ಇದರ ರಸವನ್ನು ಅಥವಾ ಚೂರ್ಣವನ್ನು ಹಾಲಿನೊಂದಿಗೆ ಅಥವಾ ತುಪ್ಪದೊಂದಿಗೆ ಸೇವಿಸಬಹುದು.

೩. ಇದು ಪ್ರಸಿದ್ಧ ‘ನಾರಾಯಣ ತೈಲ’ದಲ್ಲಿ ಉಪಯುಕ್ತ ವಸ್ತು. ಬೇವಿನರಸ ಮತ್ತು ಹಾಲಿನಲ್ಲಿ ತಯಾರಿಕೆ, ನೋವು ಶಮನವಾಗಿ ಸಂಧಿವಾತಗಳಲ್ಲಿ ಉಪಯುಕ್ತ. ೪. ಬೇರಿನ ಕಷಾಯವನ್ನು ಸಕ್ಕರೆಯೊಂದಿಗೆ ರಕ್ತಸ್ರಾವದಲ್ಲಿ ಮಲಬದ್ಧತೆಯಲ್ಲಿ ಯಶಸ್ವಿಯಾಗಿ ನೀಡಬಹುದು. H. ಶತಾವರಿ ಖಂಡ ಅಥವಾ ‘ಶತಾವರೆಕ್ಸ್’ ಎಂಬ ಬೋರ್ನ್‌ವಿಟಾದಂತೆ ಗ್ರಾಮ

ಅಂಗಡಿಗಳಲ್ಲಿ ಸಿಗುತ್ತದೆ. ಇದನ್ನು ಹಾಲಿನಲ್ಲಿ ಬೆರೆಸಿ ಉಪಯೋಗಿಸುವುದರಿಂದ,

ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವುದಲ್ಲದೆ, ಸಾಮಾನ್ಯ ದೌರ್ಬಲ್ಯವನ್ನು ನಿವಾರಿಸುತ್ತದೆ.

[t4b-ticker]

You May Also Like

More From Author

+ There are no comments

Add yours