ನಾಯಕನಹಟ್ಟಿ ಪಪಂ ಸೋಲಿಗೆ ರಾಮರೆಡ್ಡಿ‌ ನೇರ ಹೊಣೆ, ಸ್ವಯಂ ಅಭಿವೃದ್ದಿಗೆ ಒತ್ತು, ಮಂಡಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ‌ನೀಡಲಿ: .ಆರ್.ಬಸವರಾಜ್ ಒತ್ತಾಯ

 

 

 

 

ನಾಯಕನಹಟ್ಟಿ: ಬಿಜೆಪಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮಂಡಲದ ಮಾಜಿ ಕಾರ್ಯದರ್ಶಿ ಡಿ.ಆರ್.ಬಸವರಾಜ್ ಒತ್ತಾಯಿಸಿದ್ದಾರೆ.

 

 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಾಯಕನಹಟ್ಟಿ ಮಂಡಲ ಅಧ್ಯಕ್ಷರಾಗಿರುವ ಇ.ರಾಮರೆಡ್ಡಿ ಅವರು ತಮ್ಮ ಅಧಿಕಾರ ಅವಧಿಯನ್ನು ಸ್ವ ಹಿತಕ್ಕಾಗಿ ಬಳಸಿಕೊಂಡಿದ್ದಾರೆ.ಸಚಿವರಾದ ಬಿ.ಶ್ರೀರಾಮುಲು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಸಂದರ್ಭದಲ್ಲಿ 58 ಗಂಗ ಕಲ್ಯಾಣ ಯೋಜನೆ ನೀಡಿದ್ದರು. ಆದರೆ ಅಧ್ಯಕ್ಷರು ಎಲ್ಲಾವನ್ನು ತಮ್ಮ ಸಮುದಾಯದವರನ್ನು ಗುರುತಿಸಿ ಬೊರವೆಲ್  ಕೊರೆಸಿಕೊಂಡಿದ್ದಾರೆ. ಮಂಡಲ ವ್ಯಾಪ್ತಿಯಲ್ಲಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಸಾರ್ವಜನಿಕರ ಹಾಗೂ ಗ್ರಾಮಗಳಿಗೆ ಉಪಯೋಗವಾಗುವ ಕೆಲಸ ಒಂದ ಸಹ ಮಾಡಿಲ್ಲ ಎಂದು ಕಿಡಿಕಾರಿದರು. ಗೌರ ಸಮುದ್ರ ಪಿಡಿಒ ವರ್ಗಾವಣೆಯಲ್ಲಿ ಮಂಡಲ ಅಧ್ಯಕ್ಷರ ಕೈವಾಡವಿದೆ. ಪ್ರತಿ ಆರು ತಿಂಗಳಿಗೊಮ್ಮೆ ಪಿಡಿಓ ಬದಲಾಗುತ್ತಿದ್ದು ಆಕ್ರಮಕ್ಕೆ ಸಹಕಾರ ನೀಡದ ಪಿಡಿಓ ಗಳನ್ಮು ವರ್ಗಾವಣೆ ಮಾಡಿಸಲಾಗುತ್ತಿದೆ. ಇದರಿಂದಾಗಿ ಗ್ರಾಮ ಪಂಚಾಯತಿ ಆಡಳಿತ ಸ್ಥಗಿತಗೊಂಡಿದೆ.

ನಾಯಕನಹಟ್ಟಿ ಪಪಂ ಚುನಾವಣೆ  ನಡೆದ 16 ಸ್ಥಾನಗಳಲ್ಲಿ ಕೇವಲ 2 ಸ್ಥಾನ ಬಿಜೆಪಿ ಪಡೆದಿದೆ. ಪಪಂ ನಿಂದ ಪಾರ್ಲಿಮೆಂಟಿನವರೆಗೂ ಬಿಜೆಪಿ ಅಧಿಕಾರದಲ್ಲಿದೆ. ಪಪಂ ಹೀನಾಯವಾಗಿ ಸೋಲಲು ಬಿಜೆಪಿ ಮಂಡಲ ಅಧ್ಯಕ್ಷ ನೇರ ಕಾರಣ ಅವರೆ ಸಂಪೂರ್ಣ ಹೊಣೆ ಒತ್ತು  ರಾಜೀನಾಮೆ ನೀಡಬೇಕು. ಅಭಿವೃದ್ಧಿ ಕಾರ್ಯಗಳ ಮೂಲಕ ಜನ ಮನ ಗೆಲ್ಲದೆ , ಪಕ್ಷ ಸಂಘಟನೆ, ಜನರ ವಿಶ್ವಾಸ ಗಳಿಸದೆ ಸೋತು ಸುಣ್ಣವಾದ ಮೇಲೆ ಯಾರೋ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿರುವುದು  ನಗು ಬರುವಂತೆ ಮಾಡಿದೆ. ತನ್ನ ಸೋಲಿನ ಪರಾಮರ್ಶೆ ಮಾಡಿಕೊಳ್ಳದೆ ಬೇರೆಯವರ ಮೇಲೆ ಚಾಡಿ ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದರು. ನೇರವಾಗಿ ಸೋಲಿಗೆ ಕಾರಣ ಹೇಳದೆ ಸಚಿವರ ಅಪ್ತ  ಸಹಾಯಕರು ಮತ್ತು ಅಧಿಕಾರಿಗಳ ಮೇಲೆ ಮೇಲೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದ್ದಾಗಿದೆ. ಪ್ರತಿ ಗ್ರಾಮಗಳಲ್ಲಿ ಗುಂಪುಗಾರಿಕೆ ಮಾಡುವುದು, ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ವೈಯಕ್ತಿಕ ಲಾಭಕ್ಕೆ ಅನುದಾ‌ನ ಹುಡುಕುವುದು ಬಿಟ್ಟರೆ ಪಕ್ಷದ ಸಂಘಟನೆಗೆ ಒತ್ತು ನೀಡಲ್ಲ. ಕಾರ್ಯಕರ್ತರ ಅಸಮಾಧಾನಕ್ಕೆ ಸಚಿವರೆ ಕಾರಣ ಎಂಬಂತೆ ಬಿಂಬಿಸುವ ಕೆಲಸ ರಾಮರೆಡ್ಡಿ ಮಾಡುತ್ತಿದ್ದಾರೆ.ಇದು ಹೀಗೆ ಮುಂದುವರೆದಿದ್ದೆ ಆದರೆ ನಾಯಕನಹಟ್ಟಿಯಲ್ಲಿ 2 ಸ್ಥಾನ ಅಲ್ಲಪಕ್ಷದ ಬುನಾದಿ ಆಲುಗಾಡುವ ಸ್ಥಿತಿ ಬಂದು ತಲುಪಿದ್ದು ಮುಂದೆ ಹೇಳ ತೀರಾದಾಗುತ್ತದೆ. ಪಕ್ಷದ ಜಿಲ್ಲಾ ಅಧ್ಯಕ್ಷರ ಕೂಡ ಇವರ ವಿರುದ್ದ ಕ್ರಮ ಕೈಗೊಂಡಿಲ್ಲ. ಜಿಪಂ.ತಾಪಂ ಚುನಾವಣೆ ಹಿತ ದೃಷ್ಟಿಯಿಂದ ಕೂಡಲೇ ಕ್ರಮ‌ಕೈ ಗೊಂಡು ಉತ್ತಮ ವ್ಯಕ್ತಿಗಳನ್ನು ಮಂಡಲ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours