ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಕೃಷಿ ಹೊಂಡಗಳನ್ನು ವೀಕ್ಷಣೆ ಮಾಡಿದ ಸಿಇಓ ಡಾ.ಕೆ.ನಂದಿನಿದೇವಿ

 

 

 

 

ಚಳ್ಳಕೆರೆ: ತಾಲ್ಲೂಕಿನ *ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮಕ್ಕೆ ಜಿಪಂ ಸಿಇಓ ಡಾ.ಕೆ. ನಂದಿನಿ ದೇವಿ ಭೇಟಿ ನೀಡಿ*, ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಕೃಷಿ ಹೊಂಡಗಳನ್ನು ವೀಕ್ಷಣೆ ಮಾಡಿದರು.
ನಂತರ ಸಿಇಓ ಡಾ.ಕೆ.ನಂದಿನಿದೇವಿ ಗ್ರಾಮೀಣ ಭಾಗದ ಜನರು ಗೂಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ನರೇಗಾ ಯೋಜನೆಯನ್ನು ರೂಪಸಿದೆ, ಆ ಯೋಜನೆಯು ಜಾಬ್ ಕಾರ್ಡ್ ಇರುವ ಕೂಲಿ ಕಾರ್ಮಿಕರಿಗೆ ವರದಾನವಾಗಬೇಕು ಎಂದು ಹೇಳಿದ ಅವರು ನರೇಗಾ ಯೋಜನೆಯಡಿ ಮಾಡುವ ಕಾಮಗಾರಿಗಳನ್ನು ಯಂತ್ರಗಳಲ್ಲಿ ಮಾಡದೆ ಜಾಮ್ ಕಾರ್ಡ್ ಇರುವ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಾಬ್ ಕಾರ್ಡ್ಗಳು ಇದ್ದರೆ ಗ್ರಾಮೀಣ ಭಾಗದ ಜನರು ಗೂಳೆ ಹೋಗುವುದನ್ನು ಬಿಟ್ಟು ತಮ್ಮ ಹೊಲಗಳಲ್ಲಿ ನರೇಗಾ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡಗಳನ್ನು ನಿರ್ಮಾಣ, ಕುರಿ ಶೆಡ್‌ಗಳು ನಿರ್ಮಾಣ ಮಾಡಿಕೊಂಡರೆ ನರೇಗಾ ಯೋಜನೆಯಡಿ ಕೂಲಿ ಪಡೆಯಬಹುದು ಎಂದು ರೈತರಿಗೆ ಸಲಹೆ ನೀಡಿದರು.
ತಾಪಂ ಇಒ ಮಡುಗಿನ ಬಸಪ್ಪ, ನರೇಗಾ ಸಹಾಯಕ ನಿರ್ದೇಶಕ ಸಂತೋಷ್, ಗ್ರಾ ಪಂ ಅಧ್ಯಕ್ಷರಾದ ಬಿ ಶಂಕರ್ ಸ್ವಾಮಿ, ಉಪಾಧ್ಯಕ್ಷೆ ಕೆ ಸಿ ಸದಸ್ಯರಾದ ಶೇಖರ್ ಗೌಡ, ಪಟ್ಲರ್ ಬೋರೆಯ್ಯ ಪಾಪಮ್ಮ ಆನಂದಪ್ಪ, ಊರಿನ ಪ್ರಮುಖರಾದ ರೇವಣ್ಣ, , ಪಿಡಿಓ ಶಶಿಕಲಾ ಹಾಗೂ ಉಪಸ್ಥಿತರಿದ್ದರು
===================================

 

 

[t4b-ticker]

You May Also Like

More From Author

+ There are no comments

Add yours