ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನೇಗ್ಗೆ ತರಬೇತಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ). ಮೇ.27:
ಮೊಳಕಾಲ್ಮೂರು ತಾಲೂಕು ನೇಕಾರ ವೃತ್ತಿಗೆ ಪ್ರಸಿದ್ಧಿ ಪಡೆದಿದೆ. ಪಾರಂಪರಿಕವಾಗಿ ನೇಯುವ ಮೊಳಕಾಲ್ಮೂರು ರೇಷ್ಮೆ  ಸೀರೆಗೆ ವಿಶ್ವ ಮಟ್ಟದಲ್ಲಿ ಬೇಡಿಕೆಯಿದೆ. ನೇಗ್ಗೆ ವೃತ್ತಿ ಕಲಿಯಲು ಇಚ್ಛಿಸುವ ಆಸಕ್ತ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನೇಗ್ಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.
ಮೊಳಕಾಲ್ಮೂರು ತಾಲೂಕು ನೇರ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ, ಏರ್ಪಡಿಸಲಾದ ಗ್ರಾಮ ವಾಸ್ತವ್ಯದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೀಮ್ಡ್ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಗೆ ನೀಡಲು ಸರ್ಕಾರದ ಹಂತದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಇಂತಹ ಅರಣ್ಯ ಪ್ರದೇಶವನ್ನು ಕೈಗಾರಿಕೆ ಅಭಿವೃದ್ಧಿ ನೀಡಲಾಗುವುದು. ಜವಳಿ ಉದ್ದಿಮೆ ಸ್ಥಾಪಿಸಲು ಅನುವುಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಗ್ರಾಮದ ಯುವ ಉದ್ಯಮಿ ಜಯಲಕ್ಷ್ಮೀ ಅವರ ಬೇಡಿಕೆ ಸ್ಪಂದಿಸಿ ನುಡಿದರು.
ಗ್ರಾಮದ ಜನರ ತೋರಿದ ಪ್ರೀತಿ ಆದರಗಳನ್ನು ಕಂಡು ಮೂಕ ವಿಸ್ಮಿತಳಾಗಿದ್ದೇನೆ. ಸರ್ಕಾರದ ಸವಲತ್ತುಗಳು ಗ್ರಾಮದ ಪತ್ರಿಯೊಬ್ಬರ ಮನೆ ಬಾಗಿಲಿಗೆ ತಲುಪಬೇಕು. ಇದರ ಉಪಯೋಗವನ್ನು ಸರ್ವರೂ ಪಡೆಯಬೇಕು. ಮಕ್ಕಳನ್ನು ಶಾಲೆಗೆ ಸೇರಿಸಿ. ಗ್ರಾಮಕ್ಕೆ ಅಗತ್ಯ ಇರುವ ಸವಲತ್ತುಗಳನ್ನು ಒದಗಿಸಲಾಗುವುದು. ಜಿಲ್ಲಾಡಳಿತ ರೈತರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಇತ್ತೀಚೆಗೆ ಮೊಳಕಾಲ್ಮೂರು ತಾಲೂಕಿನಲ್ಲಿ 153 ಕುರಿಗಳು ಸಡಿಲು ಬಡೆದು ಮೃತಪಟ್ಟಿದ್ದವು. 24 ಗಂಟೆಯಲ್ಲಿ ಬಾಧಿತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.
ತಹಶಿಲ್ದಾರ್ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಹಣಿ ತಿದ್ದುಪಡಿ, ಪೌತಿ ಖಾತೆ, ಪಿಂಚಣಿ, ಆಧಾರ್, ಜಾತಿ ಪ್ರಮಾಣ ಪತ್ರ, ಬರ ಪರಿಶೀಲನೆ, ಪಡಿತರ ಚೀಟಿ, ವಾಸದ ಮನೆ, ಪ್ರೌಢಶಾಲೆ ನಿರ್ಮಾಣ ಸೇರಿದಂತೆ 82 ಅರ್ಜಿ ಸ್ವೀಕಾರವಾಗಿದ್ದವು. ಇದರಲ್ಲಿ 63 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. 19 ಅರ್ಜಿಗಳ ವಿಲೇವಾರಿ ಬಾಕಿಯಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ 34 ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ. ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮಸ್ಥರು ಶಾಲಾ ದುರಸ್ಥಿಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಲಿದ್ದಾರೆ. ಗ್ರಾಮ ಪ್ರತಿ ಮನೆಗೂ ತುಂಗಭದ್ರಾ ಹಿನ್ನೀರಿನಿಂದ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.
*ಕೃಷಿ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನ ಉದ್ಘಾಟನೆ* ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾದ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉದ್ಘಾಟಿಸಿದರು. ಕೃಷಿ ಸಂಜೀವಿನಿ ಹಾಗೂ ಸಂಚಾರಿ ಪಶು ಚಿಕಿತ್ಸಾಲಯಕ್ಕೆ ವಾಹನಗಳಿಗೆ ಚಾಲನೆ ನೀಡಿದರು.
*ಆರೋಗ್ಯ ತಪಾಸಣೆಗೆ ಒಳಗಾದ ಜಿಲ್ಲಾಧಿಕಾರಿ* ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ, ರಕ್ತದಲ್ಲಿನ ಸಕ್ಕರೆ ಅಂಶದ ಪರೀಕ್ಷೆ, ರಕ್ತದ ಒತ್ತಡದ ತಪಾಸಣೆಯನ್ನು ಸ್ವತಃ ಮಾಡಿಕೊಂಡರು.
*ಗ್ರಾಮದ ಮಹಿಳೆಯರಿಗೆ ಸೀಮಂತ ಕಾರ್ಯ* ಮಾತೃ ವಂದನಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ಪೆÇೀಷಣಾ ಅಭಿಯಾನದ ಅಂಗವಾಗಿ ಮಕ್ಕಳಿಗೆ ಅನ್ನಪ್ರಶಾನ ಮಾಡಲಾಯಿತು. ನಂತರ ಬಾಲ್ಯ ವಿವಾಹ ನಿμÉೀಧ ಕುರಿತು ಕರಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿದರು.
ಇದೇ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ, ವೃದ್ಯಾಪ್ಯ ವೇತನ, ವಿಧವಾ ಮಾಶಾಸನ, ಮನಸ್ವಿನಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ, ಪಡಿತರ ಚೀಟಿ, ಪಹಣಿ, ವಿಕೇಲಚೇತನರಿಗೆ ವಿμÉೀಶ ಗುರುತಿನ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ,ಉಪಾಧ್ಯಕ್ಷ ಬಂಗಿಸೂರಯ್ಯ, ತಾ.ಪಂ.ಇಓ ಜಾನಕಿರಾಮ್,ಮಾಜಿ ಜಿ.ಪಂ. ಸದಸ್ಯ ಜಗಳೂರಯ್ಯ, ಮಾಜಿ ತಾ.ಪಂ.ಸದಸ್ಯ ರತ್ನಮ್ಮ ಮಹೇಶ್, ತಾಲೂಕು ವೈದ್ಯಾಧಿಕಾರಿ ಡಾ.ಮಧುಕುಮಾರ್, ಸಿ.ಡಿ.ಪಿ.ಓ ಸವಿತಾ, ಸಮಾಜ ಕಲ್ಯಾಣ ಅಧಿಕಾರಿ ಮಮತಾ, ಪಶು ವೈಧ್ಯಾಧಿಕಾರಿ ರಂಗನಾಥ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾ.ಪಂ.ಸದಸ್ಯರು ಉಪಸ್ಥರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಸ್ವಾಗತಿಸಿದರು. ಸಂಗೀತ ಶಿಕ್ಷಕ ಕೆ.ಓ.ಶಿವಣ್ಣ ನಾಡಗೀತೆ ಹಾಗೂ ರೈತಗೀತೆ ಪ್ರಸ್ತುತ ಪಡಿಸಿದರು.

 

 

[t4b-ticker]

You May Also Like

More From Author

+ There are no comments

Add yours