ಕೃಷಿ ಜಮೀನು ಸರ್ವೆ ಶುಲ್ಕ ಏರಿಸಿದ್ದ ಸರ್ಕಾರದ ಇಳಿಕೆ ಆದೇಶ ಎಷ್ಟು ಕಡಿಮೆ ಗೊತ್ತೆ.

 

 

 

 

ಬೆಂಗಳೂರು, ಫೆ.11: ಕಳೆದು ತಿಂಗಳು ದಿಢೀರ್ ಮಾಡಲಾಗಿದ್ದ ಕೃಷಿ ಜಮೀನು ಸರ್ವೆ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ಸರ್ವೆ ನಂಬರ್‌ಗೆ 35 ರೂ. ಇದ್ದ ಸರ್ವೆ ಶುಲ್ಕವನನ್ನು ರಾಜ್ಯ ಸರ್ಕಾರ 2021ರ ನವೆಂಬರ್‌ನಲ್ಲಿ ಏಕಾಏಕಿ ನೂರಾರು ಪಟ್ಟು ಹೆಚ್ಚಳ ಮಾಡಿತ್ತು.

 

 

ಇದು ಕೊರೊನಾ ಮತ್ತು ಬೆಳೆ ನಷ್ಟಗಳಿಂದ ಕಂಗಾಲಾಗಿದ್ದ ರೈತರಿಗೆ ಇದು ಸಾಕಷ್ಟು ಸಮಸ್ಯೆ ಉಂಟು ಮಾಡಿತ್ತು. ಇತ್ತೀಚೆಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯ ದಿನೇಶ್ ಗೂಳಿಗೌಡ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆಯ ಗಮನ ಸೆಳೆದು ಸರ್ವೆ ಶುಲ್ಕದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದ್ದರು. ಇದರ ಬೆನ್ನಲ್ಲೇ ಸರ್ವೆ ಶುಲ್ಕ ಪರಿಷ್ಕರಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಪರಿಷ್ಕೃತ ಆದೇಶದ ಪ್ರಕಾರ ಹದ್ದು ಬಸ್ತು ಅರ್ಜಿ ಶುಲ್ಕ ಗ್ರಾಮೀಣ ಭಾಗದಲ್ಲಿ ಎರಡು ಎಕರೆವರೆಗೂ 500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 300 ರೂಪಾಯಿಯಂತೆ ದರ ನಿಗದಿ ಮಾಡಿ ಆದೇಶಿಸಿದೆ. ಇನ್ನು ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2000 ರೂ. ಇದ್ದು, ನಂತರ ಪ್ರತಿ ಎಕರೆಗೆ 400 ರೂ. ನಿಗದಿ ಮಾಡಿ ಕಂದಾಯ ಇಲಾಖೆ (ಭೂಮಾಪನ) ಫೆ.9ರಂದು ಆದೇಶ ಹೊರಡಿಸಿದೆ.

11ಇ ನಕ್ಷೆ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿಗೆ  ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೂ 1500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿಯಂತೆ ದರ ನಿಗದಿಯಾಗಿದೆ. ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2500 ರೂ. ಇದ್ದು, ನಂತರ ಪ್ರತಿ ಎಕರೆಗೆ 1000 ರೂ.ಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours