ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

 

 

 

 

ಹಿರಿಯೂರು : ಹಿರಿಯೂರು ನಗರದಿಂದ ವೇದಾವತಿ ನಗರಕ್ಕೆ ಪೂರೈಸುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದ್ದು ಒಂದನೇ ವಾರ್ಡ್ ನಿಂದ ಐದನೇ ವಾರ್ಡ್ ನ ನಾಗರೀಕರು ಸಹಕರಿಸಬೇಕಾಗಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವರಂಜನಿ ಯಾದವ್ ವಿನಂತಿಸಿದ್ದಾರೆ.

 

 

ವೇದಾವತಿ ನದಿಯ ಸೇತುವೆ ಬಳಿ ನೀರು ಹರಿಯುತ್ತಿದ್ದ ಪೈಪ್ ಹೊಡೆದು ಹೋಗಿರುವುದರಿಂದ ದುರಸ್ಥಿಯಾಗಬೇಕಿದೆ ಸೇತುವೆ ಕೆಳಭಾಗದಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿ ಪೈಪ್ ದುರಸ್ಥಿಯಾಗಲು ಕನಿಷ್ಠ 8 – 10 ದಿನಗಳ ಕಾಲವಕಾಶ ಆಗಬಹುದು ಆದ ಕಾರಣ ನೀರಿನ ಪೂರೈಕೆಯಲ್ಲಿ ಅಡಚಣೆ ಆಗಿದ್ದು,ಅಗತ್ಯ ಇದ್ದ ಕಡೆ ನಗರಸಭೆ ವತಿಯಿಂದ ಅಲ್ಲಿಯವರೆಗೆ ಟ್ಯಾಂಕ್ ಮೂಲಕ ನೀರು ಪೊರೈಸಲು ಪ್ರಯತ್ನಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

[t4b-ticker]

You May Also Like

More From Author

+ There are no comments

Add yours