ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಕೇಸ್ ಹೆಚ್ಚಳ : ಎಂಎಲ್ಸಿ ಕೆ.ಎಸ್.ನವೀನ್

 

 

 

 

ಚಿತ್ರದುರ್ಗ: ಕಾಂಗ್ರೆಸ್  ಮಾಡಿದ ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ ಗಳು ಹೆಚ್ಚಳ ಆಗಿದೆ ಎಂದು ಎಂಎಲ್ಸಿ ಕೆ.ಎಸ್. ನವೀನ್  ಹೇಳಿದ್ದಾರೆ.

 

 

ನಗರದ  ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿ  ಕೋವಿಡ್ ಅನ್ನುವಂತದ್ದು ಸೃಷ್ಟಿ ಮಾಡಿದ್ದಾರೆ.‌ ಕೋವಿಡ್ ಅನ್ನುವುದೇ ಇಲ್ಲ ಎನ್ನುವ ಹೇಳಿಕೆಗಳನ್ನ‌ ಕೊಟ್ಟು ಜನರ ವಿರೋಧದ ಮಧ್ಯೆಯೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಜನರನ್ನ ಸೇರಿಸಿ ಪಾದಯಾತ್ರೆ ಮಾಡುವ ಮೂಲಕ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೋವಿಡ್ ನ ಸಂಖ್ಯೆ ಮಿತಿ ಮೀರುವ ರೀತಿಯಲ್ಲಿ ಕಾಂಗ್ರೆಸ್ ತನ್ನ ಪಾದಯಾತ್ರೆಯ ಮೂಲಕ ಪರಿಣಾಮ ಬೀರಿದೆ. ಕಾಂಗ್ರೆಸ್ ರಾಜಕೀಯ ಲಾಭಕ್ಕೋಸ್ಕರ ಪಾದಯಾತ್ರೆ ಮಾಡಿದ್ದು ಇದು ಪಾದಯಾತ್ರೆ ಅಲ್ಲ ಅದು ರನ್ನಿಂಗ್ ರೇಸ್ ಆಗಿದೆ. ಸಿ ಎಂ ಕುರ್ಚಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಮಧ್ಯ ರನ್ನಿಂಗ್ ರೇಸ್ ಎಂದು ನವೀನ್ ಅವರು ಲೇವಡಿ ಮಾಡಿದ್ದಾರೆ. ಆ ರನ್ನಿಂಗ್ ಚೇರಗೊಸ್ಕರ ಕೋವಿಡ್ ಅನ್ನ ಅವರು ಆ ಭಾಗದ ಜನರಿಗೆ ಕೊಡುವ ಕೆಲಸವನ್ನ‌ ಮಾಡಿದ್ದಾರೆ. ನಮ್ಮ‌ ಜಿಲ್ಲೆಯ ಕೆಲವು ಕಾಂಗ್ರೆಸ್ ನವರು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಪ್ರಶ್ನೆ ಮಾಡುತ್ತೇನೆ. ಅವರ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಗೋಸ್ಕರ ಪಾದಯಾತ್ರೆ ಮಾಡಿಲ್ಲ. ಅವರ ಸರ್ಕಾರ 5 ವರ್ಷ ಇದ್ದರು ಭದ್ರಾ ಮೇಲ್ದಂಡೆಗೋಸ್ಕರ ಪಾದಯಾತ್ರೆ ಮಾಡಿಲ್ಲ. ಇಂದು ಬೆಂಗಳೂರಿಗೆ ನೀರು ಕೊಡಿಸಲು ಚಿತ್ರದುರ್ಗದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ನಮ್ಮ‌ ಜಿಲ್ಲೆಯ ಮೇಲೆ ಅವರಿಗೆ ಇರುವ ಕಾಳಜಿಯನ್ನ ತೋರಿಸುತ್ತದೆ ಎಂದು  ಹೇಳಿದ್ದಾರೆ. ಇನ್ನೂ ಕಾಂಗ್ರೆಸ್ ನ ಸಾಕಷ್ಟು ಜನರಿಗೆ ಕೋವಿಡ್ ಸೋಂಕು ತಗುಲಿದೆ. ಖರ್ಗೆ ಸೇರಿದಂತೆ ಮುಂಚೂಣಿ ನಾಯಕರಿಗೆ ಕೋವಿಡ್ ಸೋಂಕು ತಗುಲಿದ್ದು ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ. . ಜಾವಾಬ್ದಾರಿಯುತ ವ್ಯಕ್ತಿಗಳು ಅವರೆ ಇಂತಹ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡಿ ಹತ್ತಾರು ಸಾವಿರ ಜನರನ್ನ ಸೇರಿಸಿ ಪಾದಯಾತ್ರೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ಮಾಧ್ಯಮ ವಕ್ತಾರ  ದಗ್ಗೆ ಶಿವಪ್ರಕಾಶ್, ಸಂಪತ್ ಇದ್ದರ.

[t4b-ticker]

You May Also Like

More From Author

+ There are no comments

Add yours