ಉಪನ್ಯಾಸಕ ಡಾ.ಚಿತ್ರ ಲಿಂಗ ಸ್ವಾಮಿ ಇನ್ನಿಲ್ಲ.

 

 

 

 

ಚಿತ್ರದುರ್ಗ : ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳ ಮೂಲಕ   ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಾತ್ರವಲ್ಲದೆ ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದ ಡಾ.ಚಿತ್ರ ಲಿಂಗ ಸ್ವಾಮಿ ಎಂ.   (54 ) ಇಂಗ್ಲೀಷ್ ಉಪನ್ಯಾಸಕರು ಇವರು ಇಂದು ಬೆಳಗ್ಗೆ 10.45 ರ ಹೊತ್ತಿಗೆ ಮಂಗಳೂರಿನ ಹಾಸ್ಪಿಟಲ್ ನಲ್ಲಿ ಇಬ್ಬರು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಪ್ರಮಾಣದ ಸ್ನೇಹಿತರು, ಶಿಷ್ಯ ವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.

 

 

ಗೆಳೆಯರೆ, ಮೃತರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಸಂಜೆ 6.30 ಗಂಟೆಗೆ ನಗರದ ಡಿ.ಸಿ.ಸರ್ಕಲ್ನಲ್ಲಿ ಅವರ ಒಡನಾಡಿ ಮಿತ್ರರು ಸೇರಲು ಕೋರಿದೆ.

ಡಾ. ಚಿತ್ರಲಿಂಗಸ್ವಾಮಿ ಇವರು ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನ ಹಳ್ಳಿಯವರು. ಶ್ರೀಯುತರು ವಿದ್ಯಾರ್ಥಿ ದಿನಗಳಿಂದಲೂ ದಲಿತ ಸಂಘರ್ಷ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಜಿಲ್ಲೆಯ ಪ್ರತಿ ಹೋರಾಟಗಳಲ್ಲಿ ಭಾಗಿಯಾಗಿದವರು. ಮಾನವೀಯ ನಡವಳಿಕೆ, ನೇರ ನಡೆ ಮತ್ತು ನುಡಿ ಇವರಲ್ಲಿನ ವಿಶೇಷ ಗುಣ. ಇವರು ಈಚೆಗೆ ಆಂಗ್ಲ ಭಾಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು.ಹಾಗೆಯೇ, ಇವರು ಜಿಲ್ಲೆಯ ಅನುದಾನಿತ ಕಾಲೇಜಿನ ಉಪನ್ಯಾಸಕರಿದ್ದರು. ಇವರ ಅಗಲಿಕೆಯು ಸಮುದಾಯಕ್ಕೆ ಜೊತೆಗೆ ಚಳುವಳಿಗಳಿಗಳಿಗೆ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ  ಎಂದು ದುಃಖಿತ ಸ್ನೇಹ ಬಳಗ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours