ಉಚಿತ ವಿದ್ಯುತ್ ಯಾರಿಗೆಲ್ಲ ಸಿಗುತ್ತದೆ, ಎಷ್ಟು ಯುನಿಟ್ ಉಚಿತ ಎಂಬ ಸಂಪೂರ್ಣ ಮಾಹಿತಿ

 

 

 

 

ಬೆಂಗಳೂರು: ರಾಜ್ಯದ  ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಬಿಪಿಎಲ್ ಕುಟುಂಬಗಳಿಗೆ ಗೃಹಬಳಕೆಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ನಿರ್ಧಾರ ಮಾಡಲಾಗಿದೆ ಎಂದು ಇಂಧನ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಗೃಹಬಳಕೆಗೆ ವಿದ್ಯುತ್ ಬಳಸುತ್ತಿರುವ ಕುಟುಂಬದವರು ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.

 

 

ಕಳೆದ  ಏಪ್ರಿಲ್ ತಿಂಗಳ  30 ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಬಾಕಿಯನ್ನು  ಸಂಪೂರ್ಣವಾಗಿ ಪಾವತಿಸಿದವರಿಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.

ಯೋಜನೆ ವ್ಯಾಪ್ತಿಗೆ ಬರುವ  ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕಕ್ಕೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದ್ದು, ವಿದ್ಯುತ್ ಬಳಕೆಯ ಪ್ರಮಾಣ ದಾಖಲಿಸುವುದು ಕೂಡ ಕಡ್ಡಾಯವಾಗಿರುತ್ತದೆ. ಫಲಾನುಭವಿಗಳು ತಮ್ಮ ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ, ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಬೇಕು. ಪ್ರತಿ ತಿಂಗಳು ಬಿಲ್ ಬಂದ ಸಂದರ್ಭದಲ್ಲಿ ಗ್ರಾಹಕರು ಪೂರ್ಣ ಮೊತ್ತ ಪಾವತಿಸಬೇಕು. ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಫಲಾನುಭವಿಗಳಿಗೆ ಹಣ ಮರು ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours