ಅಭಿವೃದ್ಧಿಯ ಹೆಸರಲ್ಲಿ ಜನರನ್ನು ಮನವೊಲಿಕೆ ಮಾಡಿ ಮತ ಗಿಟ್ಟಿಸಿಕೊಂಡರು: ಸಚಿವ ಬಿ. ಶ್ರೀರಾಮುಲು

 

 

 

 

ಮೊಳಕಾಲ್ಮುರು:

ಚಿತ್ರದುರ್ಗ:ಮೊಳಕಾಲ್ಮೂರು ಪಟ್ಟಣದಲ್ಲಿ ಭಾನುವಾರದಂದು ಮುಖ್ಯ ರಸ್ತೆ ವಿಸ್ತರಣೆಗೆ ಭೂಮಿ ಪೂಜೆ ನೆರವೇರಿಸಲಾಯಿತು..

ಮುಖ್ಯ ರಸ್ತೆ ವಿಸ್ತರಣೆಗೆ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಮತ್ತು ಸಾರಿಗೆ ಸಚಿವರಾದ ಶ್ರೀರಾಮುಲು ನೆರವೇರಿಸಿದರು…

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಮಾತನಾಡಿ ದೇಶದಲ್ಲಿ ಚತುಷ್ಪತ ರಸ್ತೆ ಯನ್ನು ಪರಿಚಯಿಸಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ…

ಅಟಲ್ ಜಿ ಅವರು ಅಂದಿನ ದಿನಮಾನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ರಸ್ತೆಯ ಅಭಿವೃದ್ಧಿ ಹರಿಕಾರ ಎನಿಸಿಕೊಂಡರು…

 

 

ಗುಡ್ಡಗಾಡು ಪ್ರದೇಶದ ರಾಜ್ಯಗಳಲ್ಲಿ ರಸ್ತೆ ನಿರ್ಮಿಸಿ ಜನ ಸಂಪರ್ಕಕ್ಕೆ ದಾರಿಮಾಡಿಕೊಟ್ಟರು ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಅತ್ಯುತ್ತಮ ದರ್ಜೆಯಲ್ಲಿ ರಸ್ತೆ ನಿರ್ಮಿಸುವಲ್ಲಿ ಈಗಿನ ಟೆಕ್ನಾಲಜಿ ಗಳನ್ನು ಬಳಸಿಕೊಂಡು ಉತ್ತಮ ರಸ್ತೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ….

ಇದೇ ವೇಳೆ ಸಾರಿಗೆ ಸಚಿವರಾದ ಶ್ರೀರಾಮುಲು ಮಾತನಾಡಿ ಕಳೆದ 60 ವರ್ಷಗಳಿಂದ ಮೊಳಕಾಲ್ಮೂರು ತಾಲೂಕನ್ನು ಯಾರೊಬ್ಬರೂ ಅಭಿವೃದ್ಧಿ ಮಾಡದೇ ಅಭಿವೃದ್ಧಿಯ ಹೆಸರಲ್ಲಿ ಜನರನ್ನು ಮನವೊಲಿಕೆ ಮಾಡಿ ಮತ ಗಿಟ್ಟಿಸಿಕೊಂಡಿದ್ದರು ಆದರೆ ನಾನು ಈ ಕ್ಷೇತ್ರಕ್ಕೆ ಶಾಸಕನಾಗಿ ಬಂದ ಮೇಲೆ ಹಿಂದೆಂದೂ ಕಂಡರಿಯದ ಯೋಜನೆಗಳನ್ನು ಜಾರಿ ಮಾಡಿದ್ದೇನೆ…

ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಭದ್ರಾ ಕುಡಿಯುವ ಹಿನ್ನೀರು ಯೋಜನೆ ಹಾಗೂ ಈಗ ಪ್ರಸ್ತುತವಾಗಿ ರಸ್ತೆ ಅಗಲೀಕರಣ ಕಾಮಗಾರಿಗೆ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದ್ದು ತಾಲೂಕು ಅಭಿವೃದ್ಧಿ ಪಥದತ್ತ ಸಾಗುತ್ತಿದೆ…

ಪಟ್ಟಣದ ರಸ್ತೆ ಕಾಮಗಾರಿಯೂ ಒಂದು ವರ್ಷದೊಳಗೆ ಮುಗಿಯಲಿದ್ದು ಮೊಳಕಾಲ್ಮುರು ಪಟ್ಟಣ ಸುಂದರ ನಗರವಾಗಲಿದೆ ಎಂದರು. ….

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ ಲಕ್ಷ್ಮಣ್ ಉಪಾಧ್ಯಕ್ಷರಾದ ಶುಭಾ ಪೃಥ್ವಿರಾಜ್ ಬಿಜೆಪಿ ಮಂಡಲದ ಅಧ್ಯಕ್ಷರಾದ ಮಂಜುನಾಥ್ ಬಿಜೆಪಿ ಮುಖಂಡರಾದ ಜಯಪಾಲಯ್ಯ ಪಾಪೇಶ್ ಮಂಜಣ್ಣ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು…

[t4b-ticker]

You May Also Like

More From Author

+ There are no comments

Add yours