ವೇಣೂರು: ಫಲ್ಗುಣಿ ಸೇವಾ ಸಂಘ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಆಶ್ರಯದಲ್ಲಿ ವೇಣೂರು ಮುಖ್ಯಪೇಟೆಯಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಇಂದು ಶ್ರೀ ವಿಘ್ನೇಶ್ವರನಿಗೆ 108 ತೆಂಗಿನಕಾಯಿ ಗಣಹೋಮ ನಡೆಯಿತು.
ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ವಿ.ಎಸ್. ಜಯರಾಜ್, ಸಮಿತಿ ಅಧ್ಯಕ್ಷರಾದ ಪಿ. ಜಗದೀಶ್ ಭಟ್ ಶ್ರೀನಿಧಿ, ಫಲ್ಗುಣಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ಎ. ಶ್ರೀಕಾಂತ್ ಉಡುಪ, ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ., ಪೂಜಾ ಸಮಿತಿ ಕಾರ್ಯದರ್ಶಿ ಪಿ. ಪ್ರಶಾಂತ್ ಹೆಬ್ಬಾರ್, ಸಮಿತಿ ಪ್ರಮುಖರಾದ ಸುದತ್ ಜೈನ್, ಪ್ರಶಾಂತ್ ಹೆಗ್ಡೆ, ಪ್ರಸನ್ನ ಹೆಬ್ಬಾರ್, ಡಾ. ಶಾಂತಿಪ್ರಸಾದ್, ಕೆ. ವಿಜಯ ಗೌಡ, ಪ್ರಸಾದ್ ಜೈನ್ ರಿಯಾಂತ್, ಪ್ರಶಾಂತ್ ನಾಯಕ್, ಸೀತಾರಾಮ ಆಚಾರ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


ಅನ್ನದಾನದ ಸೇವಾಕರ್ತರಾದ ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಅಗಮಿಸಿದ್ದರು.



