ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಮೃತ ಅನ್ನಛತ್ರದ ಲೋಕಾರ್ಪಣೆ ಸಮಾರಂಭವು


ಸೆ. 17ರಂದು ಬೆಳಿಗ್ಗೆ 9-30ರಿಂದ ನಡೆಯಲಿದೆ.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ನೂತನ ಅನ್ನಛತ್ರದ ಉದ್ಘಾಟನೆ ನೆರವೇರಿಸಲಿದ್ದು,
ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮತ್ತು ಧಾರ್ಮಿಕ ಮುಖಂಡರಾಗಿರುವ
ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ನಾಮಫಲಕಗಳನ್ನು ಅನಾವರಣ ಮಾಡಲಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ
ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ಅವರು ಮಾಡಲಿದ್ದು,
ಪ್ರಗತಿಪರ ಕೃಷಿಕರಾಗಿರುವ ನಾರಾಯಣ ಪೂಜಾರಿ ದೋಟ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್,
ವೇಣೂರಿನ ಉದ್ಯಮಿಗಳಾದ ಕೆ. ಭಾಸ್ಕರ ಪೈ, ಬಿ. ಜಗದೀಶ್ ನಾಯಕ್, ಸುಳ್ಯದ ಉದ್ಯಮಿ ಲೋಕೇಶ್ ಕೋರ್ಲೋಡಿ,
ಶಾಂತಾ ಬಾಬು ಕುಂದರ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.



