ವೇಣೂರು: ಸೆ.10ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವೇಣೂರು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ.
ಕಾಶಿಪಟ್ಣ ಗ್ರಾಮದ ನೂಜಡ್ಡ ಮನೆಯ ಶುಭಕರ ಪೂಜಾರಿಯವರ ಪುತ್ರ ಪ್ರಿತೇಶ್ ಎಸ್. ಪೂಜಾರಿ ಸೆ. ೧೦ರ ಸಂಜೆ ಮನೆಯಿಂದ ಹೊರಟವನು ವಾಪಸಾಗದೆ ನಾಪತ್ತೆಯಾಗಿದ್ದನು. ವ್ಯಾಪಕವಾಗಿ ಹುಡುಕಾಡಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಇದೀಗ ಕುಟುಂಬ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಪ್ರಿತೇಶ್ ಎಸ್. ಪೂಜಾರಿ ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಅವನನ್ನು ಕರೆದುಕೊಂಡು ಬರುವ ಪ್ರಕ್ರಿಯೆ ನಡೆಯುತ್ತಿದ್ದು, ಮನೆಯವರು ಹಾಗೂ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಬೆಂಗಳೂರಿಗೆ ತೆರಳಿದ್ದ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.





