ವೇಣೂರು: ಇಲ್ಲಿಯ ಮುಖ್ಯಪೇಟೆಯ ಮಹಾವೀರ ನಗರದ ಬ್ರಹ್ಮಯಕ್ಷ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆರಂಭಗೊಂಡ ನಗು ಡೆಂಟಲ್ ಕೇರ್ ಇದರ ಶುಭಾರಂಭವು ಸೆ. 13ರಂದು ಜರಗಿತು.
ವೇಣೂರು ವರ್ತಕರ ಸಂಘದ ಅಧ್ಯಕ್ಷರು, ಪ್ರಸಿದ್ಧ ಉದ್ಯಮಿಗಳಾಗಿರುವ ಕೆ. ಭಾಸ್ಕರ ಪೈ ಅವರು ನೂತನ ನಗು ದಂತ ಚಿಕಿತ್ಸಾಲಯದ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ವೇಣೂರಿನ ಸುಪ್ರಸಿದ್ಧ ವೈದ್ಯರಾಗಿರುವ ಡಾ. ಶಾಂತಿಪ್ರಸಾದ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ, ವೇಣೂರು ಪರಿಸರದಲ್ಲಿ ಅಗತ್ಯವಾಗಿ ಬೇಕಾಗಿದ್ದ ದಂತ ಚಿಕಿತ್ಸಾಲಯ ಆರಂಭಿಸಿರುವುದು ಮೆಚ್ಚುಗೆಯ ವಿಚಾರ. ಜನತೆಗೆ ಉತ್ತಮ ಸೇವೆ ನಿರಂತರವಾಗಿ ಲಭಿಸುವಂತಾಗಲಿ ಎಂದರು.





