ವೇಣೂರು: ಬಕ್ರೀದ್ ಹಬ್ಬದ ಪ್ರಯುಕ್ತ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರುಗಳ ಸಭೆಯು ವೇಣೂರು
ಪಿಎಸ್ಐ ಶ್ರೀಮತಿ ಒಮನ ಎನ್.ಕೆ ರವರ ಅಧ್ಯಕ್ಷತೆಯಲ್ಲಿ ವೇಣೂರು ಠಾಣೆಯಲ್ಲಿ ನಡೆಯಿತು.
ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಸರ್ವ ವಿಧದ ಸಹಕಾರ ನೀಡುವುದಾಗಿ ಪಿಎಸ್ಐ ತಿಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸುವಂತೆ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರುಗಳಿಗೆ ಮನವಿ ಮಾಡಿದರು.
ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ, ಪತ್ರಕರ್ತ ಎಚ್. ಮಹಮ್ಮದ್ ವೇಣೂರು, ಸಮಿಯುಲ್ಲಾ ಖಾನ್ ಪಿಲ್ಲಿಯಾ, ಇಕ್ಬಾಲ್ ಖಾನ್ ವೇಣೂರು, ಅಲಿಯಬ್ಬ ಪುಲಬೆ, ಸಯ್ಯದ್ ಬಶೀರ್ ವೇಣೂರು, ಅಬ್ದುಲ್ ಖಾದರ್ ಅಳದಂಗಡಿ, ಉಳ್ತೂರು ಅಜೀಜುದ್ದೀನ್, ಅಶ್ರಫ್ ಶಾಂತಿನಗರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಹೆಡ್ ಕಾನ್ಸ್ಟೇಬಲ್ ರೋಹಿನಾತ್ ಧನ್ಯವಾದವಿತ್ತರು.





