ವೇಣೂರು: ವೇಣೂರಿನಿಂದ ಅಳದಂಗಡಿ ಸಂಪರ್ಕಿಸುವ ಸೂಳಬೆಟ್ಟು ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬೃಹತ್ ಮರವೊಂದು ಉರುಳಿ ಬಿದ್ದು ಸಂಚಾರ ಸಂಪರ್ಕ ಕಡಿತಗೊಂಡಿದೆ.
ಮರ ವಿದ್ಯುತ್ ತಂತಿಮೇಲೆಯೇ ಉರುಳಿ ಬಿದ್ದಿದ್ದು, ಮೆಸ್ಕಾಂಗೂ ನಷ್ಟ ಸಂಭವಿಸಿದೆ. ಇಂದು ಮುಂಜಾನೆ ಪ್ರಯಾಣಿಕರು ತೆರಳುವಾಗ ಮರ ಬಿದ್ದಿರುವ ಬಗ್ಗೆ ಗೊತ್ತಾಗಿದ್ದು, ಅರಣ್ಯ ಮತ್ತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಘಟನೆ ವೇಳೆ ರಸ್ತೆಯಲ್ಲಿ ಸಂಚಾರ ಇಲ್ಲದೇ ಇದ್ದುದರಿಂದ ಭಾರೀ ಅವಘಡ ತಪ್ಪಿದಂತಾಗಿದೆ.



