ವೇಣೂರು; ಪಡ್ಡoದಡ್ಕ ಶಾಲೆಯಲ್ಲಿ ಉಚಿತ ಬರೆಯುವ ಪುಸ್ತಕಗಳನ್ನು ಪೆರಿಂಜೆಯ ಸಾರಾ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ನ ವತಿಯಿಂದ 15-06-2026 ರಂದು ವಿತರಿಸಲಾಯಿತು.
ಶಾಲಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಪಿಎಸ್ ಶಬ್ಬೀರ್ ವಹಿಸಿದ್ದರು. ಶಾಲಾ ಸ್ಥಾಪಕ ಸದಸ್ಯ ಶಂಕರ್ ಭಟ್ ಬಾಲ್ಯ ಮಾತಾಡಿ, ಈ ವರ್ಷದಿಂದ ಶಾಲೆಯಲ್ಲಿ ಎಲ್ಕೆಜಿ ಯಿಂದ 5 ನೇ ತರಗತಿಯವರೆಗೆ ಆಂಗ್ಲ ತರಗತಿ ಆರಂಭವಾಗಿದ್ದು ಇಬ್ಬರು ಪದವೀಧರ ಟೀಚರ್ ನ್ನು ಸರಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೆತ್ತವರು ದೂರದ ಇಂಗ್ಲಿಸ್ ಮೀಡಿಯಂ ಶಾಲೆಗೆ ಪ್ರತಿಷ್ಠೆಗೋಸ್ಕರ ಕಳಿಸದೆ ಊರಿನ ಶಾಲೆಗೆ ಕಳಿಸಿದರೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸರಕಾರದ ಸೌಲಭ್ಯ ಮತ್ತು ಒಳ್ಳೆಯ ಸಂಸ್ಕಾರ ಸಿಗುತ್ತೆ ಎಂದರು.
ಸಾರಾ ಇಬ್ರಾಹಿಂ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಮಾತಾಡಿ, ಟ್ರಸ್ಟ್ ವಿದ್ಯೆ ಬಗ್ಗೆ ಪ್ರಥಮ ಆಧ್ಯತೆ ನೀಡಿತಿದ್ದು ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯಚಿಸುತಿದೆ. ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಿದ್ದು ಸಂತೋಷವಾಗುತಿದೆಂದರು.
ಈ ಶಾಲಾ ಸ್ಥಾಪಕ ಸದಸ್ಯ ಇಸ್ಮಾಯಿಲ್ ಗಾಂಧಿನಗರ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು ,ಅರುಣ್ ಪೂಜಾರಿ ಜಾರಿಗೆದಡಿ, ಉಮರ್.ಕೆ., ರಹಿಮಾನ್ ಪೆರಿಂಜೆ ಮಾತಾಡಿದರು ಮುಖ್ಯ ಶಿಕ್ಷಕಿ ಕಮಲಮ್ಮ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಪೆರಿಂಜೆಯ ಬುಲೆಟ್ ಖಾದರ್ ವೇದಿಕೆಯಲ್ಲಿ ಉಪಸಿತರಿದ್ದರು.
ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಹಾಗು ಶಾಲಾ ಅಭಿವೃದ್ಧಿ ಯೋಜನೆಗಳಲ್ಲಿ ಸಹಕರಿಸಿದ ಜಾರಿಗೆಡಡಿ ಅರುಣ್ ಪೂಜಾರಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು.



