ಮಂಗಳೂರು: ಸುಗ್ಗಿ ಸೌಹಾರ್ದ ಸಹಕಾರಿ ಸಂಘ (ನಿ.) ಕಂಕನಾಡಿ ಇದರ 13ನೇ ವಾರ್ಷಿಕ ಮಹಾಸಭೆಯು ಎಪೌಂರಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿರುವ ಸಿಟಿ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮವನ್ನು ಸುಗ್ಗಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಲ. ಅನಿಲ್ದಾಸ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸಂಘದ ಶ್ರೇಯೋಭಿವೃದ್ದಿಯಲ್ಲಿ ಸಂಘದ ಸದಸ್ಯರ ಹಾಗೂ ಗ್ರಾಹಕರ ಪಾಲು ಬಹುದೊಡ್ಡದಿದೆ ಎಂದರು. ಅಲ್ಲದೆ ಸಿಬ್ಬಂದಿ ವರ್ಗದವರ ಕಾರ್ಯವೈಖರಿಯಲ್ಲಿ ಶ್ಲಾಘಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ರವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಅಟ್ಲೂರ್, ನಿರ್ದೇಶಕರುಗಳಾದ ದೇವರಾಜ್, ಶ್ರೀಮತಿ ಆಶಾಲತಾ, ಪ್ರಸಾದ್ ತೊಮಸ್, ಮಹೇಶ್ ಪಾಣೇರ್, ರಾಜೇಶ್ ಪಾಣೇರ್, ಧೀರಜ್, ರಮೇಶ್ ಪುತ್ತೂರು, ಜಯರಾಜ್ ಪ್ರಕಾಶ್, ಸುನಿಲ್ ಕುಮಾರ್ ಚೈತ್ರ ಉಪಸ್ಥಿತರಿದ್ದರು.
ಕು. ಶ್ರದ್ಧಾ ಮತ್ತು ರಕ್ಷಿತಾ ಪ್ರಾರ್ಥಿಸಿದರು. ಪ್ರಸಾದ್ ತೊಮಸ್ ವಂದಿಸಿದರು.



