ವೇಣೂರು: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸರ್ಕಾರವು ಜಾರಿಗೆ ತಂದಿರುವ ವಿಶೇಷ ರಕ್ಷಣಾ ವ್ಯವಸ್ಥೆ ಅಕ್ಕ ಪಡೆಯ ಪೊಲೀಸ್ ಸಿಬ್ಬಂದಿ ಜು. 20ರಂದು ಬಜಿರೆ ಪಿಯಂಶ್ರೀ ಕೆಪಿಎಸ್ (Pradhan Mantri Schools for Rising India) ಶಾಲೆಗೆ ಭೇಟಿ ನೀಡಿದರು.

ಅಕ್ಕಪಡೆಯ ಸಿಬ್ಬಂದಿ ನವ್ಯಾ ಅವರು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ಮಕ್ಕಳ ಸಹಾಯವಾಣಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಅಕ್ಕಪಡೆಯ ಸಿಬ್ಬಂದಿ ಭವ್ಯಾ ಅವರು ‘ಬೇಡ ಬ್ರೋ’ ಅಭಿಯಾನದ ಬಗ್ಗೆ ಮತ್ತು ‘ಆಪರೇಷನ ರೈಸ್’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇಣೂರು ಠಾಣೆಯ ಸಿಬ್ಬಂದಿ ಕಾವೇರಿ ವಿ. ಅವರು ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಶೆಟ್ಟಿ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗ್ರೀಸ್ಮಾ ಸ್ವಾಗತಿಸಿ, ಸಾನಿಧ್ಯ ಜಿ. ವಂದಿಸಿದರು. ಸ್ಪಂದನಾ ನಿರೂಪಿಸಿದರು.



