ವೇಣೂರು: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆ ವೇಣೂರು ಇದರ ಸಹಯೋಗದೊಂದಿಗೆ 17ರ ವಯೋಮಾನದ ಬಾಲಕ ಬಾಲಕಿಯರ ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟವು ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜು. 27ರಂದು ನೆರವೇರಿತು.


ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ್, ಗ್ರೇಡ್ 2 ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ದೇವಸ್ಯ, ಗ್ರೇಡ್ 2 ಸಂಘದ ಜಿಲ್ಲಾಧ್ಯಕ್ಷ ರವಿರಾಜ್ ಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಅಧ್ಯಕ್ಷರಾದ ಜಯರಾಜ್ ಜೈನ್, ನಾರಾವಿ ವಲಯದ ಕ್ರೀಡಾ ಮೇಲ್ವಿಚಾರಕರಾದ ಲೋಕಯ್ಯ, ಬಿಐಇಆರ್ಟಿ ಜಗದೀಶ್, ಬಜಿರೆ, ಪಡ್ಡಂದಡ್ಕ, ನಿಟ್ಟಡೆ ವಲಯದ ಕ್ರೀಡಾ ಮೇಲ್ವಿಚಾರಕಿ ಶ್ರೀಮತಿ ಆರತಿ, ಕರಾಟೆ ತರಬೇತುದಾರರಾದ ಅಶೋಕ್, ನವಚೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕಿ ಸಿಸ್ಟರ್ ಲಿಲ್ಲಿ ಗೋಮ್ಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೀರಾ ಡಿಸೋಜಾ ಹಾಗೂ ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ದಿವ್ಯಾ ಮಹೇಶ್ ಇವರು ಉಪಸ್ಥಿತರಿದ್ದರು.

ಜಿಲ್ಲಾಮಟ್ಟಕ್ಕೆ ಆಯ್ಕೆ
ಒಟ್ಟು 22 ಶಾಲೆಗಳು ಸ್ಪರ್ಧಿಸಿದ್ದು, 82+ ವಿಭಾಗದಲ್ಲಿ ನವಚೇತನ ಶಾಲೆಯ ವಿದ್ಯಾರ್ಥಿ ಶರ್ವಿನ್ ಮೋನಿಸ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಹಾಗೂ 17ರ ವಯೋಮಾನದ ಬಾಲಕಿಯರ ಪಂದ್ಯಾಟದಲ್ಲಿ ಸಾನ್ವಿ ಎಂ. ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ ಸಂಚಿತ್ ಕೆ. ದ್ವಿತೀಯ ಸ್ಥಾನ ಹಾಗೂ ಆತ್ಮಿಕ್ ಹಾಗೂ ಶಮಿತ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.



