ಉಪ್ಪಿನಂಗಡಿ: ಇಲ್ಲಿ ಹರಿಯುತ್ತಿರುವ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ಶನಿವಾರ ಸಂಜೆ ವೇಳೆಗೆ ಎರಡೂ ನದಿಗಳಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿದು ಬಂತು. ನದಿ ನೀರು ಅಪಾಯ ಮಟ್ಟದ ಅಂಚಿನಲ್ಲಿತ್ತು.

ನೀರಿನ ಮಟ್ಟ ಏರಿಕೆಯ ಭೀತಿಯ ಹಿನ್ನೆಲೆಯಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಸಹಿತ ಅಧಿಕಾರಿಗಳು ಭೇಟಿ ನೀಡಿದರು. ಇಒ ನವೀನ್ ಭಂಡಾರಿ, ಪೊಲೀಸ್ ಠಾಣಾಧಿಕಾರಿ ಸುತೇಶ ಕೆ.ಪಿ. ಸಹಿತ ಸಿಬಂಧಿ ವರ್ಗ, ದೇವಸ್ಥಾನದ ಆಡಳಿತ ವರ್ಗದ ವೆಂಕಪ್ಪ ಪೂಜಾರಿ, ವೆಂಕಟೇಶ್ ಭಟ್, ಪಂಚಾಯತ್ ಮಾಜಿ ಉಪಾದ್ಯಕ್ಷೇ ವಿದ್ಯಾಲಕ್ಷ್ಮೀ ಪ್ರಭು ಹಾಗೇ ಪಂಚಾಯತ್ ಅಧಿಕಾರಿಗಳು, ಗೃಹರಕ್ಷಕ ದಳ, ಈಜುಗಾರರು ಸಹಿತ ಸ್ಥಳದಲ್ಲಿ ಉಪಸ್ಥಿತರಿದ್ದರು. ಪರಿಸ್ಥಿತಿ ಅವಲೋಕಿಸಿ ತ್ವರಿತ ವಾಗಿ ಎಲ್ಲಾ ತಗ್ಗು ಪ್ರದೇಶಗಳಿಗೆ ನಿಗಾವಹಿಸಲು ಎಸಿ ಸಲಹೆ ನೀಡಿದರು.



