ಗುರುವಾಯನಕರೆ: ಯೋಗಾಭ್ಯಾಸ ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಬಲವರ್ಧನೆಗೆ ಅತ್ಯಗತ್ಯ ಎಂದು ಖ್ಯಾತ ಯೋಗಗುರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಆವಿಷ್ಕಾರ ಯೋಗ ಸಂಸ್ಥೆಯ ಸಂಸ್ಥಾಪಕರಾದ ಕುಶಾಲಪ್ಪ ಗೌಡ ಅವರು ಹೇಳಿದರು.
ಎಕ್ಸೆಲ್ ಟೆಕ್ಕೋ ಸ್ಕೂಲ್ ಗುರುವಾಯನಕೆರೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ, ಭಾರತ ಜಗತ್ತಿಗೆ ಕೊಟ್ಟ ಹಲವು ಮಹತ್ತ್ವದ ಕೊಡುಗೆಗಳಲ್ಲಿ ಯೋಗವೂ ಒಂದು. ಇಂದಿನ ತಲೆಮಾರು ಅದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟೆಕ್ಕೋ ಸ್ಕೂಲ್ ನ ಪ್ರಾಂಶುಪಾಲರಾದ ಸುಮಿತ್ರ ಅವರು ಮಾತನಾಡಿ, ಏಕಾಗ್ರತೆಗೆ ಯೋಗ ಸಹಕಾರಿ. ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಾಭ್ಯಾಸ ಮಾಡ ಬೇಕೆಂದರು.
ಯೋಗಗುರು ಕುಶಾಲಪ್ಪ ಗೌಡ ಅವರು ವಿದ್ಯಾರ್ಥಿಗಳಿಗೆ ಪ್ರಮುಖ ಆಸನಗಳನ್ನು ಮಾಡಿಸುವುದರ ಮೂಲಕ ಯೋಗ ದಿನಾಚರಣೆಗೆ ಹೊಸ ಮೆರುಗನ್ನು ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಸುಂದರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ಧ್ಯಾನ ಹಾಗೂ ಸೂರ್ಯ ನಮಸ್ಕಾರವನ್ನು ಮಾಡಲಾಯಿತು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು. 8ನೇ ತರಗತಿಯ ವಿದ್ಯಾರ್ಥಿನಿ ಕು.ಶಝ ಕಾರ್ಯಕ್ರಮವನ್ನು ನಿರೂಪಿಸಿದರು. ಏಳನೇ ತರಗತಿಯ ವಿದ್ಯಾರ್ಥಿನಿ ಕು. ಫಿದಾ ಫಾತಿಮಾ ಸ್ವಾಗತಿಸಿದರು. 6ನೇ ತರಗತಿಯ ಕು.ದೈಶೀ ಧನ್ಯವಾದ ಸಮರ್ಪಿಸಿದರು.



