ಹೊಸಂಗಡಿ: ದೈನಂದಿನ ಜೀವನದಲ್ಲಿ ರಸ್ತೆಗಳು, ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆಗಳ ಕೊರತೆಯಿಂದಾಗಿ ನಡೆಯಬಾರದ ಅವಘಡಗಳು ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ನಿರ್ಲಕ್ಷ್ಯ ಮತ್ತು ನಿಯಮಗಳ ಪಾಲನೆಯಿಲ್ಲದಿರುವುದನ್ನು ತೋರಿಸುತ್ತದೆ. ಇಂಥದ್ದೊಂದು ನಿರ್ಲಕ್ಷ್ಯ ಪೆರಿಂಜೆ ಶಾಲಾ ಬಳಿ ಗೋಚರವಾಗುತ್ತದೆ.

ವೇಣೂರಿನಿಂದ ಮೂಡಬಿದಿರೆಗೆ ತೆರಳುವ ರಾಜ್ಯಹೆದ್ದಾರಿ ಪೆರಿಂಜೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೊಂದಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಾಲೆ ಬಿಟ್ಟ ಬಳಿಕ ಮಕ್ಕಳು ಬಸ್ಗಾಗಿ ಹೆದ್ದಾರಿ ಅಡ್ಡವಾಗಿ ದಾಟುವುದು ಸಾಮಾನ್ಯವಿದೆ. ಇಲ್ಲಿ ಹೆದ್ದಾರಿ ನೇರವಾಗಿಯೇ ಇದ್ದು, ವಾಹನಗಳು ವೇಗವಾಗಿ ಚಲಿಸುತ್ತಿರುತ್ತದೆ.
ಸೂಚನಾ ಫಲಕಕ್ಕೆ ಆವರಿಸಿದ ಗಿಡಗಂಟಿಗಳು
ಅಪಾಯ ತಪ್ಪಿಸಲೆಂದೇ ಮುನ್ನಚ್ಚೆರಿಕೆಯಾಗಿ ಇಲ್ಲಿಯ ಹೆದ್ದಾರಿ ಬದಿ ಶಾಲೆ ಇದೆ ಎಂಬ ಸೂಚನ ಫಲಕ ಅಳವಡಿಸಲಾಗಿದೆ. ಆದರೆ ಅದು ಮರಗಿಡಗಳ ಗೆಲ್ಲುಗಳು ಆವರಿಸಿ ವಾಹನ ಚಾಲಕರಿಗೆ ಕಾಣಿಸದಂತಾಗಿದೆ.
ಚಾಲಕರಿಗೆ ಗೋಚರವಾಗುವಂತೆ ಮುನ್ನಚ್ಚರಿಕೆ ನೀಡುವ ಇಂತಹ ಸೂಚನಾ ಫಲಕಗಳ ಅವಶ್ಯಕತೆ ಮನಗಂಡು ಸಂಬಂಧಪಟ್ಟವರು ಸೂಚನಾ ಫಲಕಕ್ಕೆ ಅಡ್ಡವಾಗುತ್ತಿರುವ ಗಿಡಗಂಟಿಗಳನ್ನು ಕಡಿಯಬೇಕಾಗಿದೆ.



