ಹೊಸಂಗಡಿ: ಸ.ಹಿ.ಪ್ರಾ. ಶಾಲೆ ಪಡ್ಡಂಡಡ್ಕ ಇಲ್ಲಿ ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಿ.ಎಸ್. ಶಬೀರ್ ರವರು ಧ್ವಜಾರೋಹಣಗೈದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಊರ ಹಿರಿಯರು, ದಾನಿಗಳಾದ ಶಂಕರ ಭಟ್ ಬಾಲ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಖಾಲಿದ್ ಪೂಲಬೆ, ನೂರುಲ್ ಹುದಾ ಜುಮ್ಮಾ ಮಸೀದಿ ಪಡ್ಡಂಡಡ್ಕ ಇದರ ಅಧ್ಯಕ್ಷರಾದ ಪುತ್ತುಮೋನು ಗಾಂಧಿನಗರ ಮತ್ತು ಕಾರ್ಯದರ್ಶಿಗಳಾದ ಬಶೀರ್ ಗಾಂಧಿನಗರ, ದಾನಿಗಳಾದ ಅರುಣ್ ಪೂಜಾರಿ ಜಾರಿಗೆದಡಿ, ಎಚ್ ಹಮೀದ್ ಗಾಂಧಿನಗರ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ರೇಖಾ ಅರುಣ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಹೊಸಂಗಡಿ ಇದರ ಕಾರ್ಯದರ್ಶಿಗಳಾದ ಕಾಂತಪ್ಪ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಕಮಲಮ್ಮ ಎಂ. ಉಪಸ್ಥಿತರಿದ್ದರು.


ಸ್ವಾತಂತ್ರ್ಯ ಮತ್ತು ಸ್ವರಾಜ್ಯದ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳ ಜಾಥ ಆಯೋಜಿಸಲಾಗಿತ್ತು. ಎಲ್ಕೆಜಿ-ಯುಕೆಜಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಸಹಕಾರ ನೀಡಿದವರನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳು ಪೋಷಕರು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕಿ ದಾಕ್ಷಾಯಿಣಿ ಸ್ವಾಗತಿಸಿದರು. ಶಿಕ್ಷಕಿ ಜೋಸ್ಲಿನ್ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು. ಶಿಕ್ಷಕಿ ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು.
`



