ವೇಣೂರು: ಇಲ್ಲಿಯ ಮಹಾವೀರ ನಗರದ ಬ್ರಹ್ಮಯಕ್ಷ ಕಾಂಪ್ಲೆಕ್ಸ್ನಲ್ಲಿ ನಗು ಡೆಂಟಲ್ ಕೇರ್ (ದಂತ ಚಿಕಿತ್ಸಾಲಯ)ನ ಉದ್ಘಾಟನ ಸಮಾರಂಭವು ಸೆ. 13ರಂದು ಬೆಳಿಗ್ಗೆ 10-00 ಗಂಟೆಗೆ ನೆರವೇರಲಿದೆ ಎಂದು ನಗು ಡೆಂಟಲ್ ಕೇರ್ನ ಮುಖ್ಯಸ್ಥೆ ಡಾ. ದೀಕ್ಷಾ ಅಶ್ವಿತ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3-30ರಿಂದ ಸಂಜೆ 6-00 ಗಂಟೆಯವರೆಗೆ ವೈದ್ಯರು ಲಭ್ಯವಿದ್ದಾರೆ. ವಾರದ ಕೆಲ ದಿನಗಳಲ್ಲಿ ದಂತ ತಜ್ಞ ವೈದ್ಯರುಗಳಾದ ಡಾ. ಮನೀಷ್ ಡೋಂಗ್ರೆ, ಡಾ. ತುಷರಾ ಕುಮಾರಿ, ಡಾ. ಸ್ಟ್ಯಾನ್ಲಿ ಎಸ್. ಲಭ್ಯವಿರುತ್ತಾರೆ.





