ವೇಣೂರು: ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಬಹುಮಾನ ಗಳಿಸಿದ್ದಾರೆ.
ಅನಘ ಜೈನ್ – (ಗಝಲ್ ಪ್ರಥಮ), ಧನುಶ್ರೀ – (ಕಾವ್ಯವಾಚನ ಪ್ರಥಮ), ಶಭರಿ – (ಆಶುಭಾಷಣ ಪ್ರಥಮ), ನಯಾಜ್ – (ಹಿಂದಿ ಭಾಷಣ ಪ್ರಥಮ), (ಮಯೂರ್ – ಮಿಮಿಕ್ರಿ ಪ್ರಥಮ), ಧವಳ್ – (ಚರ್ಚಾ ಸ್ಪರ್ಧೆ ಪ್ರಥಮ), ಅಮೋಘ – (ತುಳು ಭಾಷಣ ಪ್ರಥಮ), ನರಸಿಂಹ ಕಾಮತ್ ಮತ್ತು ಪ್ರಾಪ್ತಿ- (ರಸಪ್ರಶ್ನೆ ಪ್ರಥಮ), ಶರತ್ (ಚಿತ್ರಕಲೆ ಪ್ರಥಮ) ತೇಜಸ್ವಿ (ರಂಗೋಲಿ ಪ್ರಥಮ), ಧನುಶ್ರೀ (ಕನ್ನಡ ಭಾಷಣ ದ್ವಿತೀಯ), ಶ್ರೀನಿಕ (ಇಂಗ್ಲೀಷ್ ಭಾಷಣ ದ್ವಿತೀಯ), ಶಬರಿ (ಜನಪದ ಗೀತೆ ತೃತೀಯ) ಮೇಘ ಶ್ಯಾಮ (ಭಗವದ್ಗೀತೆ ಧಾರ್ಮಿಕ ಪಠಣ ತೃತೀಯ) ಹಾಗೂ ಲಹರಿ (ಪ್ರಬಂಧ ದ್ವಿತೀಯ) ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಉಪಪ್ರಾಂಶುಪಾಲರು, ಶಿಕ್ಷಕ ವೃಂದ, ಹಾಗೂ ಎಸ್ಡಿಎಂಸಿ ಅಭಿನಂದನೆ ಸಲ್ಲಿಸಿದ್ದಾರೆ.









