ವೇಣೂರು ದೇವಾಡಿಗರ ಸೇವಾ ವೇದಿಕೆ; ಪ್ರತಿಭಾ ಪುರಸ್ಕಾರ-ವಿದ್ಯಾರ್ಥಿವೇತನ ವಿತರಣೆ
ವೇಣೂರು: ಹಿಂದುಳಿದ ವರ್ಗಗಳಲ್ಲಿ ಒಂದಾದ ದೇವಾಡಿಗ ಸಮಾಜದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾದಂತಹ ಶಿಕ್ಷಣಗಳನ್ನು ಪಡೆದು ಉನ್ನತವಾದಂತಹ ಹುದ್ದೆಗೆ ಅಂದರೆ ಐಎಎಸ್ ಐಪಿಎಸ್ ಆಗುವಂತೆ ಶ್ರಮಿಸಬೇಕು ಎಂದು ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ರವರು ಹೇಳಿದರು.
ಅವರು ವೇಣೂರು ದೇವಾಡಿಗರ ಸೇವಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪುರಸ್ಕಾರ ಸನ್ಮಾನ ಅಭಿನಂದನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.


ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯ, ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡು ದೇಶದ ಭವಿಷ್ಯ ರೂಪಿಸುವ ಶಕ್ತಿಯಾಗಬೇಕು ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹೇಳಿದರು.
ದೇವಾಡಿಗ ಸಮಾಜದ ಗ್ರಾಮ ಸಹಾಯಕ ಹುದ್ದೆಯಲ್ಲಿದ್ದು ಇತ್ತೀಚಿಗೆ ವೃತ್ತರಾದ ಶ್ರೀ ಜಗದೀಶ್ ಠೇವಾಡಿಗ ರಪಲ್ಕೆ, ವೇದಿಕೆಯ ಹಿರಿಯ ಸದಸ್ಯರಾದ ಶ್ರೀಮತಿ ಗಿರಿಜಾ ದೇವಾಡಿಗ ಕೆರೆಕೋಡಿ ಇವರಿಗೆ ಸನ್ಮಾನವನ್ನು ಮಾಡಿ ಶುಭ ಹಾರೈಸಿದರು. ವೇದಿಕೆ ವತಿಯಿಂದ ಇತ್ತೀಚಿಗೆ ಬೆಸ್ಟ್ ಎಮ್ಎಲ್ಎ ಪ್ರಶಸ್ತಿಯನ್ನು ಪಡೆದಂತಹ ಶ್ರೀ ಹರೀಶ್ ಪೂಂಜಾ ರವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾಸಲಾಯಿತು.
ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಧರ್ಮಪಾಲ್ ಯು. ದೇವಾಡಿಗ ಅಧ್ಯಕ್ಷರು, ವಿಶ್ವದೇವಾಡಿಗ ಮಹಾಮಂಡಲ, ಬಾರ್ಕೂರು, ಪ್ರಕಾಶ್ ದೇವಾಡಿಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ವೇಣೂರು, ಶ್ರೀಮತಿ ಸುಮತಿ ಪಿ. ಎನ್. ಅಧ್ಯಕ್ಷರು, ದೇವಾಡಿಗರ ಮಹಿಳಾ ವೇದಿಕೆ, ವೇಣೂರು, ಶ್ರೀಮತಿ ಮಲ್ಲಿಕಾ ಹೆಗ್ಡೆ ಅಧ್ಯಕ್ಷರು, ಗ್ರಾಮ ಪಂಚಾಯತು ವೇಣೂರು, ಹರೀಶ್ ದೇವಾಡಿಗ ಉಪನ್ಯಾಸಕರು, ಎಕ್ಸೆಲ್ ಕಾಲೇಜು ಗುರುವಾಯನಕೆರೆ, ಶೇಖರ ದೇವಾಡಿಗ ಉದ್ಯಮಿಗಳು, ಪಾಲಬೆ ಅಳದಂಗಡಿ, ಶ್ರೀಮತಿ ಜಯಂತಿ ತಿಮ್ಮಪ್ಪ ದೇವಾಡಿಗ
ಸದಸ್ಯರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ, ವೇಣೂರು, ಗೌರವಾಧ್ಯಕ್ಷರಾದ ಸುರೇಶ್ ಮೊಯ್ಲಿ,ದೇವಾಡಿಗರ ಸೇವಾ ವೇದಿಕೆಯ ಪದಾಧಿಕಾರಿಗಳು, ಗಣ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



