ಅನಾದಿ ಕಾಲದಿಂದಲೂ ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ, ದೀಪಾವಳಿ, ದಸರಾ ಹೀಗೆ ಹಲವು ಹಬ್ಬಗಳನ್ನು ಬಹಳ ಸಂಪ್ರದಾಯಭರಿತವಾಗಿ, ನಂಬಿಕೆಯೊಂದಿಗೆ ಆಚರಿಸಲಾಗುತ್ತದೆ. ಅದೇ ಸಾಲಿನಲ್ಲಿ ಆಟಿ ಅಮಾವಾಸ್ಯೆ ಕೂಡಾ ಒಂದು. ಅದೇ ಕಾರಣದಿಂದ ತುಳುನಾಡನ್ನು “ಧರ್ಮ ಹೊತ್ತ ನಾಡು, ಪುಣ್ಯ ಬಿತ್ತ ಬೀಡು” ಎಂದು ಕರೆಯುತ್ತಾರೆ. ಹಾಗಿದ್ರೆ ಕರಾವಳಿಯಲ್ಲಿ ಆಟಿ ಅಮಾವಾಸ್ಯೆಯಂದು ಪಾಲೆ ಮರದ (ಹಾಲೆ ಮರದ) ಕಷಾಯ ಕುಡಿಯುತ್ತಾರೆ. ಹಾಗಿದ್ರೆ ಆ ಕಷಾಯ ಕುಡಿಯುವುದೇಕೆ? ಅದರ ಹಿಂದಿರುವ ರಹಸ್ಯ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಿಂದೂ ಧರ್ಮದಲ್ಲಿ ಆಷಾಡ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನದಂದು ಮೈಸೂರು, ಬೆಂಗಳೂರು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವೃತ ಎಂದು ಆಚರಿಸಲಾಗುತ್ತದೆ. ಅದೇ ಹಬ್ಬವನ್ನು ಕರಾವಳಿ ಭಾಗಗಳಲ್ಲಿ”ಆಟಿ ಅಮಾವಾಸ್ಯೆ” ಎಂದು ಆಚರಿಸಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಸಂಪೂರ್ಣವಾಗಿ ತುಳುನಾಡಿನಲ್ಲಿ ಆಷಾಢ ಮಾಡವನ್ನು ಆಟಿ ತಿಂಗಳು ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ಬರುವ ಅಮಾವಾಸ್ಯೆಯ ದಿನವನ್ನು “ಆಟಿ ಅಮಾವಾಸ್ಯೆ” ಎಂದು ಕರೆಯಲಾಗುತ್ತದೆ.
ಆಟಿ ಅಮಾವಾಸ್ಯೆ ಎಂದರೇನು?
ತುಳುನಾಡಿನಲ್ಲಿ ಆಷಾಢ ಮಾಸವನ್ನು ‘ಆಟಿ’ ಎಂದು ಕರೆಯಲಾಗುತ್ತದೆ. ಇನ್ನು ಆಟಿ ತಿಂಗಳು ಮಳೆಗಾಲದ ಋತುವಿನಲ್ಲಿ ಬರುವುದರಿಂದ, ಈ ಸಮಯದಲ್ಲಿ ಎದುರಾಗುವ ಅನಾರೋಗ್ಯ ತಡೆಯಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಆಟಿ ಅಮಾವಾಸ್ಯೆ ಆಚರಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ದಿನ ಖಾಲಿ ಹೊಟ್ಟೆಯಲ್ಲಿ ‘ಪಾಲೆ ಮರ’ದ (ಹಾಲ ಮರ/ಸಪ್ತಪರ್ಣಿ) ಕಷಾಯ ಕುಡಿಯುವ ಹಾಗೂ ಪವಿತ್ರ ಸ್ನಾನ ಮಾಡುವ ವಿಶಿಷ್ಟ ಪರಂಪರೆಯನ್ನು ತುಳುವರು ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.
ಧರ್ಮ ಹೊತ್ತ ನಾಡು, ಪುಣ್ಯ ಬಿತ್ತ ಬೀಡು ತುಳುನಾಡು!
ಅನಾದಿ ಕಾಲದಿಂದಲೂ ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ, ದೀಪಾವಳಿ, ದಸರಾ ಹೀಗೆ ಹಲವು ಹಬ್ಬಗಳನ್ನು ಬಹಳ ಸಂಪ್ರದಾಯಭರಿತವಾಗಿ, ನಂಬಿಕೆಯೊಂದಿಗೆ ಆಚರಿಸಲಾಗುತ್ತದೆ. ಅದೇ ಸಾಲಿನಲ್ಲಿ ಆಟಿ ಅಮಾವಾಸ್ಯೆ ಕೂಡಾ ಒಂದು. ಅದೇ ಕಾರಣದಿಂದ ತುಳುನಾಡನ್ನು “ಧರ್ಮ ಹೊತ್ತ ನಾಡು, ಪುಣ್ಯ ಬಿತ್ತ ಬೀಡು” ಎಂದು ಕರೆಯುತ್ತಾರೆ. ಹಾಗಿದ್ರೆ ಕರಾವಳಿಯಲ್ಲಿ ಆಟಿ ಅಮಾವಾಸ್ಯೆಯಂದು ಪಾಲೆ ಮರದ (ಹಾಲೆ ಮರದ) ಕಷಾಯ ಕುಡಿಯುತ್ತಾರೆ. ಹಾಗಿದ್ರೆ ಆ ಕಷಾಯ ಕುಡಿಯುವುದೇಕೆ? ಅದರ ಹಿಂದಿರುವ ರಹಸ್ಯ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಆರೋಗ್ಯಕ್ಕೆ ಒಳ್ಳೆಯದು ಪಾಲೆ ಮರದ ಕಷಾಯ!
ಈ ತಿಂಗಳಿನ ಅಮಾವಾಸ್ಯೆಯಂದು ತುಳುವರು ಹಾಲೆ (ಪಾಲೆ) ಮರದ ತೊಗಟೆಯಿಂದ ತಯಾರಿಸಿದ ಕಹಿ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸಂಪ್ರದಾಯವನ್ನು ದಶಕಗಳಿಂದಲೂ ಪಾಲಿಸುತ್ತಾ ಬರುತ್ತಿದ್ದಾರೆ. ಈ ಕಷಾಯಕ್ಕೆ ಅಪಾರ ಔಷಧೀಯ ಗುಣಗಳಿವೆ ಎಂಬ ನಂಬಿಕೆ ತಲೆಮಾರುಗಳಿಂದ ಇದ್ದರೆ, ಮತ್ತೊಂದೆಡೆ ಸಂಪ್ರದಾಯ ಕೂಡಾ ಹೌದು. ಆಟಿ ಅಮಾವಾಸ್ಯೆ ತುಳುನಾಡಿನ ಜನಪದ ಸಂಸ್ಕೃತಿಯನ್ನು ತೋರಿಸಿದರೆ, ಪಾಲೆ ಮರದ ಕಷಾಯ ಆರೋಗ್ಯ ಸಂಪ್ರದಾಯದ ಮುಖ್ಯ ಭಾಗವಾಗಿ ಗುರುತಿಸಿಕೊಳ್ಳುತ್ತದೆ.
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗಿ ಶೀತ, ಜ್ವರ, ಮಲೇರಿಯಾ, ಹೊಟ್ಟೆ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಮಯ. ಈ ಹಿನ್ನೆಲೆಯಲ್ಲಿ ಹಾಲೆ ಮರದ ಕಷಾಯವನ್ನು ಸೇವಿಸುವುದು ವರ್ಷಪೂರ್ತಿ ಆರೋಗ್ಯವನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ. ಅದೇ ನಂಬಿಕೆಗಾಗಿ ಈ ಪಾಲೆ ಮರದ ಕಷಾಯವನ್ನು ಕುಡಿಯುವ ಸಂಪ್ರದಾಯವನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗಿದೆ.