ವೇಣೂರು: ಉಜಿರೆಯ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವೇಣೂರಿನ ನವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ.


ಪ್ರಾಥಮಿಕ ಬಾಲಕಿಯರ 14 ವರ್ಷದೊಳಗಿನ (U -14) ವಿಭಾಗದಲ್ಲಿ ಆಧ್ಯಾ. ಹೆಚ್, ನಿರ್ವಿ, ಚಾರ್ವಿ, ಶ್ರೀರಾಧ್ಯ ಅವರನ್ನೊಳಗಂಡ ತಂಡವು ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಹಾಗೂ ಆಧ್ಯಾ,ಎಚ್ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದು ಅದೇ ರೀತಿ ಬಾಲಕರ 17 ವರ್ಷದೊಳಗಿನ (U -17) ವಿಭಾಗದಲ್ಲಿ ಶ್ರವನ್ ರಾಜ್, ಆಧಿತ್ಯ, ಹನೀನ್, ಸುಹೇಲ್ ಅವರನ್ನೊಳಗೊಂಡ ತಂಡವು ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಹಾಗೂ ಶ್ರವನ್ ರಾಜ್ ಉತ್ತಮ ಆಟಗಾರ ಪ್ರಶಸ್ತಿ ಪಡೆದು ಪ್ರಾರ್ಥಮಿಕ ವಿಭಾಗದ ಬಾಲಕಿಯರು ಮತ್ತು ಪ್ರೌಢ ಶಾಲೆ ವಿಭಾಗದ ಬಾಲಕರು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯ್ಯೋಪಾದ್ಯಾಯಿನಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.



