ವೇಣೂರು: ಕರಿಮಣೇಲು ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ವೇಣೂರು ಲಯನ್ಸ್ ಸೇವಾ ಸಭಾಭವನದಲ್ಲಿ ಸೆ. 5ರಂದು ನಡೆಯಿತು.
ಸಂಘದ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ರೂ. 74,43 ಲಕ್ಷ ವ್ಯವಹಾರ ನಡೆಸಿ, 3.08 ಲಕ್ಷ ರೂ. ಲಾಭ ಗಳಿಸಿದೆ ಎಂದರು. ಸಂಘವು ನಿರಂತರವಾಗಿ ಸಮಾಜಿಕ ಸೇವಾ ಚಟುವಟಿಕೆಗಳಿಗೆ ಸಹಕಾರ ನೀಡುತ್ತಾ ಬಂದಿದೆ, ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.



ಕೆಎಂಎಫ್ ವಿಸ್ತರಣಾಧಿಕಾರಿ ರಾಜೇಶ್ ಪಿ. ಕಾಮತ್ ಅವರು ಸಭೆಯಲ್ಲಿ ಭಾಗವಹಿಸಿ, ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿ, ಸಂಘದ ಸದಸ್ಯರಿಗೆ ಕೆಎಂಎಫ್ನಿಂದ ದೊರೆಯುವ ಸವಲತ್ತುಗಳ ಮಾಹಿತಿ ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಶೀನ ದೇವಾಡಿಗ, ನಿರ್ದೇಶಕರುಗಳಾದ ಪಿ. ದೇಜಪ್ಪ ಶೆಟ್ಟಿ, ಲೂಯಿಸ್ ಸೆರಾವೊ, ಕೃಷ್ಣ ಶೇರಿಗಾರ, ಲಕ್ಷ್ಮಣ ಶೆಟ್ಟಿ, ಆನಂದ ಸುವರ್ಣ, ಅಬ್ದುಲ್ ಗಫೂರ್, ಶ್ರೀಮತಿ ರೋಹಿಣಿ ಪ್ರಕಾಶ್, ಶ್ರೀಮತಿ ರೀತಾ ದೇವಾಡಿಗ ಹಾಗೂ ಶ್ರೀಮತಿ ಕಮಲ ಉಪಸ್ಥಿತರಿದ್ದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕೆ. ವರದಿ ಮಂಡಿಸಿದರು. ಸಂಘದ ನಿರ್ದೇಶಕ ಲಕ್ಷ್ಮಣ ಪೂಜಾರಿ ನಿರೂಪಿಸಿದರು.

ಸನ್ಮಾನ
ಹಿರಿಯ ಸದಸ್ಯೆ ಲಕ್ಷ್ಮೀ, ರೈಮನ್ ಲೋಬೋ ಹಾಗೂ ಗುಣಪಾಲ ಪೂವಣಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿರುವ ಕು. ಶಾನ್ವಿ ಪರಾರಿ ಮತ್ತು ಕು. ವಿಯೊನಾ ಫೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು.



