ವೇಣೂರು: ಕ್ರಿಸ್ತರಾಜ ದೇವಾಲಯ ವೇಣೂರು, ಕಥೋಲಿಕ್ ಸಭಾ ವೇಣೂರು ಘಟಕ, ಭಾರತೀಯ ಕಥೋಲಿಕ್ ಯುವ ಸಂಚಾಲನ ವೇಣೂರು ಘಟಕ, ಕಥೋಲಿಕ್ ಯುವ ಸಂಚಾಲನ ವೇಣೂರು ಘಟಕ, ಹಾಗೂ ಪರಿಸರ ಆಯೋಗ ಇವರ ನೇತೃತ್ವದಲ್ಲಿ ಜು.19ರದು ಚರ್ಚ್ ವಠಾರದಲ್ಲಿ “ವನಮಹೋತ್ಸವ ಕಾರ್ಯಕ್ರಮ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ವಂದನೀಯ ಫಾಧರ್ ಎಡ್ವಿನ್ ಸಂತೋಷ್ ಮೋನಿಸ್, ಭಾ.ಕ.ಯು.ಸ೦. ವೇಣೂರು ಘಟಕದ ಸಚೇತಕಿ ಸಿ.ಗ್ರೆಸಿಲ್ಡಾ, ಕಥೋಲಿಕ ಸಭೆಯ ಅಧ್ಯಕ್ಷ ಹಾಗೂ ಸಚೇತಕ ಶ್ರೀ ಅರುಣ್ ಡಿಸೋಜ, ಭಾ.ಕ.ಯು.ಸ೦. ವೇಣೂರು ಘಟಕದ ಅಧ್ಯಕ್ಷ ಜೋಯಲ್ ಮಸ್ಕರೇನ್ಹಸ್, ಕಾರ್ಯದರ್ಶಿ ಜೆನಿಶಿಯ ರೇಗೊ, ಕಥೋಲಿಕ್ ಯುವ ಸಂಚಾಲನದ ಅಧ್ಯಕ್ಷೆ ಎಡ್ರಿಯ ರೇಗೊ, ಕಾರ್ಯದರ್ಶಿ ರೀನಲ್ ರೇಗೊ, ಘಟಕದ ಸದಸ್ಯರು, ಹಾಗೂ ಕ್ರೈಸ್ತ ಬಾಂಧವರು ಹಾಜರಿದ್ದರು.



