ವೇಣೂರು: ಶಾಲೆಯಿರುವುದು ಕೇವಲ ಪಾಠ ಕಲಿಯಲು ಮಾತ್ರವಲ್ಲ, ಅದು ಪ್ರೀತಿ ಮತ್ತು ಕಾಳಜಿಯ ತವರು ಎಂಬುದನ್ನು ಇಲ್ಲೊಬ್ಬರು ಖಾಸಗಿ ಶಾಲೆಯ ಶಿಕ್ಷಕಿ ಸಾಬೀತುಪಡಿಸಿದ್ದಾರೆ.


ವೇಣೂರು ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಯ ಶಿಕ್ಷಕಿ ಶ್ರೀಮತಿ ವಾಣಿ ರಾಜೇಂದ್ರ ಅವರು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಅಭಿಮಾನ ಹಾಗೂ ಸಹಕಾರವನ್ನು ವ್ಯಕ್ತಪಡಿಸಿದರು.
ಬಜಿರೆ ಗ್ರಾಮದ ಮುದ್ದಾಡಿ ರಾಜೇಂದ್ರ ಆಚಾರ್ಯ ಅವರ ಪತ್ನಿ ಶ್ರೀಮತಿ ವಾಣಿ ರಾಜೇಂದ್ರ ಅವರು ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಪುತ್ರಿ ಕು. ಲಾವಣ್ಯ ಅವರು ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕಿಯ ಈ ಮಾತೃವಾತ್ಸಲ್ಯ ಮತ್ತು ಅಪಾರ ಸಮಾಜಸೇವೆಗೆ ಶಾಲಾ ಆಡಳಿತ ಮಂಡಳಿ, ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



