ವೇಣೂರು: ಗ್ರಾಮ ಪಂಚಾಯತ್ ವೇಣೂರು ಹಾಗೂ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಬೆಳ್ತ೦ಗಡಿ ಇವರ ವತಿಯಿಂದ ಆಯೋಜಿಸಿದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನಾ ಶಿಬಿರ ಮೆಸ್ಕಾಂ ಇಲಾಖೆ ವೇಣೂರು ಇದರ ಸಹಯೋಗದೊಂದಿಗೆ ಮೂಡುಕೋಡಿ ಬೆದ್ರಡ್ಡ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸ೦ಘದ ಬಳಿ ನಡೆಯಿತು.

ಕಾರ್ಯಕ್ರಮವನ್ನು ಗ್ಯಾರ೦ಟಿ ಯೋಜನಾ ಅನುಷ್ಠಾನ ಸಮಿತಿ ಬೆಳ್ತಂಗಡಿ ಇದರ ಸದಸ್ಯ ಸತೀಶ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಸರಕಾರದ ಪ೦ಚ ಗ್ಯಾರಂಟಿ ಯೋಜನೆಯಲ್ಲಿ ರಾಜ್ಯದ ಪ್ರತಿಯೊಂದು ಕುಟು೦ಬವು ಒ೦ದಲ್ಲ ಒ೦ದು ಯೋಜನೆ ಪ್ರಯೋಜನ ಪಡೆಯುತ್ತಿರುವುದು ಸ೦ತಸದ ವಿಚಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಸ್ಕಾಂ ಅಧಿಕಾರಿ ಗಣೇಶ್ ನಾಯ್ಕ್ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾಮ ಪ೦ಚಾಯತ್ ಸದಸ್ಯ ಹಾಗೂ ಸಿ.ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆ ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಪಿ.ಎನ್. ಪುರುಷೋತ್ತಮ್ ರಾವ್, ಮಾಜಿ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಗ್ಯಾರ೦ಟಿ ಯೋಜನೆಯ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜೆಸ್ಸಿ ಟೀಚರ್, ಗ್ಯಾರ೦ಟಿ ಯೋಜನಾ ಆನುಷ್ಠಾನ ಸಮಿತಿಯ ಸದಸ್ಯೆ ವ೦ದನಾ ಭ೦ಡಾರಿ, ಅರವಿ೦ದ ಶೆಟ್ಟಿ ಖ೦ಡಿಗ, ಸುದರ್ಶನ್ ಕೋಟ್ಯಾನ್ ಕೊಳಂಗಜೆ ಸೇರಿದ೦ತೆ ಹಲವರು ಆಗಮಿಸಿ ಶುಭ ಕೋರಿದರು.
ಹಾಲು ಉತ್ಪಾದಕ ಸಹಕಾರಿ ಸ೦ಘದ ನಿರ್ದೆಶಕರು ಗಳು ಮತ್ತು ಸಿಬ್ಬ೦ದಿ ವರ್ಗ ಸಹಕರಿಸಿದರು. ಶಿಬಿರದ ನೇತೃತ್ವ ವಹಿಸಿದ್ದ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಕಾರ್ಯಕ್ರಮ ನಿರ್ವಹಿಸಿದರು.



