ಆರಂಬೋಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗ್ರಾಮ ಶಾಖೆ ಆರಂಬೋಡಿ ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆಯನ್ನು ಆರಂಬೋಡಿ ಹನ್ನೆರಡುಕವಲು ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಹಿರಿಯರಾದ ಹರೀಶ್ಚಂದ್ರ ನಾಯಕ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಮಿತಿಯ ಹಿರಿಯ ಸಂಘಟಕ ಸೋಮ ಅಜ್ಜಾಡಿಪಲ್ಕೆ ದೀಪ ಬೆಳಗಿಸಿದರು. ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ದರ್ನಪ್ಪ ಒಳಬೈಲು, ತನಿಯ ಒಳಬೈಲು,ಸಮಿತಿಯ ಸಂಚಾಲಕರು ಸುರೇಶ್ ಎಚ್ ಆರಂಬೋಡಿ,ಮಾಜಿ ತಾ. ಪಂ. ಸದಸ್ಯರಾದ ಡಿ. ಓಬಯ್ಯಾ,ಪದಾಧಿಕಾರಿಗಳಾದ ಸಂದೀಪ್ ಅಜ್ಜಾಡಿಪಲ್ಕೆ, ತಿಮ್ಮಪ್ಪ ಒಳಬೈಲು, ಪುರುಷೋತ್ತಮ್, ವಿಠಲ,ರಘುರಾಮ್, ದಿನೇಶ್, ಜಗದೀಶ್,ಪದ್ಮನಾಭ, ವಿನೋದ್ ಹಾಗೂ ಸಮಿತಿಯ ಸರ್ವ ಸದಸ್ಯರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಡಿ. ಓಬಯ್ಯಾ ರವರು ಅಂಬೇಡ್ಕರ್ ವಿಚಾರಧಾರೆ ಯನ್ನು ನೀಡಿ, ಸರ್ವರನ್ನು ಸ್ವಾಗತಿಸಿದರು. ಇತ್ತೀಚಿಗೆ ನಿಧನರಾದ ಸಂಘದ ಹಿರಿಯ ಮುಖಂಡ ಶೀನ ಕಜ್ಜಾಡಿ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.





