ಆರಂಬೋಡಿ: ಗ್ರಾಮ ಪಂಚಾಯತು ಆರಂಬೋಡಿ, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಬೆಳ್ತ೦ಗಡಿ ಇವರ ವತಿಯಿಂದ ಆಯೋಜಿಸಿದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನಾ ಶಿಬಿರ ಮೆಸ್ಕಾಂ ಇಲಾಖೆ ವೇಣೂರು ಇದರ ಸಹಯೋಗದೊಂದಿಗೆ ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಬಳಿ ನಡೆಯಿತು.

ಗ್ಯಾರ೦ಟಿ ಯೋಜನಾ ಅನುಷ್ಠಾನ ಸಮಿತಿ ಬೆಳ್ತಂಗಡಿ ಇದರ ಸದಸ್ಯ ಸತೀಶ್ ಹೆಗ್ಡೆ, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಲಯನ್ಸ್ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಮೆಸ್ಕಾಂ ಅಧಿಕಾರಿ ಗಣೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.



