ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಎ. 22ರಂದು ಮಹಾರಥೋತ್ಸವ ನಡೆಯಲಿದೆ.
ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, 11 ಗಂಟೆಯಿಂದ ಚೂರ್ಣೋತ್ಸವ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ಗಂಟೆಯಿಂದ ಭಜನೆ, ಅರಸರಿಗೆ ಸ್ವಾಗತ, ಅಲಂಕಾರ ಪೂಜೆ ಬಳಿಕ ಶ್ರೀ ಕೊಡಮಣಿತ್ತಾಯ ದೈವದ ಗಗ್ಗರಸೇವೆ ನಡೆಯಲಿದೆ. ರಾತ್ರಿ ಉತ್ಸವ, ಮಹಾರಥೋತ್ಸವ, ಬಾಕಿಮಾರು ಗದ್ದೆಗೆ ಸವಾರಿ, ದೈವ-ದೇವರ ಭೇಟಿ, ಅವಭೃತ ಸ್ನಾನ ಬಳಿಕ ಧ್ವಜಾವರೋಹಣ ನಡೆಯಲಿದೆ.
ಎ. 23ರಂದು ರಾತ್ರಿ 8 ಗಂಟೆಯಿಂದ ಅಂಗಣಪಂಜುರ್ಲಿ ದೈವದ ನೇಮ ನಡೆಯಲಿದೆ.





