ಅಳದಂಗಡಿ: ಸುಲ್ಕೇರಿಮೊಗ್ರು ಗ್ರಾಮದ ಪಲ್ಕೆಯಲ್ಲಿ ಶ್ರೀ ಮಹಾಮಾಯಿ ದೇವರ ೧೨ನೇ ಪ್ರತಿಷ್ಠಾವರ್ಧಂತಿಯ ಉದ್ಯೀಶ ಸಾನಿಧ್ಯ ಕಲಶಾಭಿಷೇಕವು ಜ. 25ರಂದು ಕೇಮೊಟ್ಟು ಗುತ್ತು ಪ್ರಭಾಕರ ಮಂಜಿತ್ತಾಯರ ನೇತೃತ್ವದಲ್ಲಿ ನಡೆಯಲಿದೆ.
ಜ. 24ರಂದು ಸಂಜೆ ವಾಸ್ತುಪೂಜೆ, ಹೋಮಗಳು ನಡೆಯಲಿದ್ದು, ಜ. 25ರಂದು ಬೆಳಿಗ್ಗೆ 8-00 ಗಂಟೆಯಿಂದ ಕಲಶಾರಾಧನೆ, ಅಧಿವಾಸ ಹೋಮ, ದುರ್ಗಾ ಹೋಮ, ಕಳಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 9-00 ಗಂಟೆಯಿಂದ ಶ್ರೀ ಮಹಿಷಾಮರ್ಧಿನಿ ಭಜನ ಮಂಡಳಿ ಸುಲ್ಕೇರಿಮೊಗ್ರು ಇವರಿಂದ ಭಜನ ಕಾರ್ಯಕ್ರಮ ನಡೆಯಲಿದೆ.
ವರದಿ: ರಾಜೇಶ್ ಕುಲಾಲ್ ಅಳದಂಗಡಿ





