ಪೆರಿಂಜೆ: ಪೆರಿಂಜೆ ಮಾಗಣೆಯ ಐದು ಗ್ರಾಮಗಳಿಗೆ ಒಳಪಟ್ಟ ಪಡ್ಡಂದಡ್ಕ ಕಟ್ಟೆ ಗಡುಸ್ಥಳದಲ್ಲಿ ಶಿಲಾಮಯವಾಗಿ ನಿರ್ಮಿಸಲಾದ ಕಾಣಿಕೆ ಡಬ್ಬಿಯನ್ನು ಗಡುಸ್ಥಳ ಕಟ್ಟೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಿನರಾಜ್ ಜೈನ್ ಪದ್ಮಾಂಬ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಜೊತೆಗಿದ್ದರು. ಈ ಗಡುಸ್ಥಳದಲ್ಲಿ ಇತ್ತೀಚೆಗೆ ನೂತನವಾಗಿ ಶಿಲಾಮಯ ಕಟ್ಟೆಗಳನ್ನು ಪುನರ್ ನಿರ್ಮಿಸಿ ಬ್ರಹ್ಮಕಲಶಾಭಿಷೇಕ ನೆರವೇರಿಸಲಾಗಿತ್ತು.



