ಕುಕ್ಕೇಡಿ: ಭಾರತೀಯ ವಿದ್ಯಾರ್ಥಿ ಸಂಘ ಕರ್ನಾಟಕ ಇದರ ವತಿಯಿಂದ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಸಂವಿಧಾನ ರಚನೆಯಲ್ಲಿ ಕುಕ್ಕೇಡಿಯ ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ/ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿ ಕು. ಮಾನಸ ಇವರು ಸುಮಾರು 25,000 ವಿದ್ಯಾರ್ಥಿಗಳ ಜೊತೆ ಭಾಗವಹಿಸಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದಿರುತ್ತಾರೆ.
ಡಾ.ಬಿ.ಆರ್ ಅಂಬೇಡ್ಕರ್ರವರ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದರು.
ಈ ಪ್ರಶಸ್ತಿಯನ್ನು ಪ್ರಥಮ ಪಿಯುಸಿ ಪರೀಕ್ಷಾ ಪ್ರಶ್ನೆ ಪತ್ರಿಕಾ ಪಾಲಕರಾಗಿ ಬಂದಂತಹ ಸರಕಾರಿ ಪದವಿ ಪೂರ್ವ ಕಾಲೇಜು ನಡ,ಇಲ್ಲಿನ ಇತಿಹಾಸ ಉಪನ್ಯಾಸಕರಾದ ಗಂಗಾಧರ್ ಹಾಗೂ ಶಾಲಾ ಸಂಚಾಲಕರಾದ ಗಿರೀಶ್ ಕೆ.ಹೆಚ್ ಇವರು ನೀಡಿ ಅಭಿನಂದಿಸಿದರು.









