ಕನ್ಯಾನದ ಬಡ ಕುಟುಂಬಕ್ಕೆ ನಿವೇಶನಸಹಿತ ‘ಕುಂಭ ಕುಠೀರ’ ಮನೆ ನಾಳೆ (ಜು. 12) ಹಸ್ತಾಂತರ
ಮಂಗಳೂರು: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಗ್ನಿ ಅವಘಡದಲ್ಲಿ ಅಸ್ವಿತ್ವ ಕಳೆದುಕೊಂಡಿರುವ ಕನ್ಯಾನದ ಬಡ ಕುಟುಂಬಕ್ಕೆ ನಾಳೆ ಜು. 12ರಂದು ನಿವೇಶನಸಹಿತ ‘ಕುಂಭ ಕುಠೀರ’ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ನಾಳೆ ಸಂಜೆ 4-30ರಿಂದ ಸಂಧ್ಯಾ ಭಜನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬಂಟ್ವಾಳ ವಿಧಾನಸಭಾಕ್ಷೇತ್ರದ ಕುಲಾಲ ಕುಂಬಾರರ ಯುವ ವೇದಿಕೆ ಈ ಸೇವಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಸೇವಾ ಮಾಣಿಕ್ಯರು, ಯೋಜನೆಯ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಖುದ್ದು ಪರಿಶೀಲನೆ ನಡೆಸಿದ ಯುವೇದಿಕೆ
ಕನ್ಯಾನದ ಈ ದುರಂತದ ವಿಚಾರ ಕುಲಾಲ ಕುಂಬಾರ ಯುವ ವೇದಿಕೆಯ ಗಮನಕ್ಕೆ ಬಂದಿದೆ. ಮಹೇಶ್ ಅರ್ತಿಮೂಲೆ, ಸುಕುಮಾರ್ ಬಂಟ್ವಾಳ ಸೇರಿದಂತೆ ಹಲವು ಪ್ರಮುಖರು ಈ ವಿಚಾರವನ್ನು ವೇದಿಕೆಯ ಜಿಲ್ಲಾಧ್ಯಕ್ಷರಾದ ಲ. ಅನಿಲ್ದಾಸ್ ಅವರ ಗಮನಕ್ಕೆ ತಂದಿದ್ದಾರೆ. ಮಂಗಳೂರಿನಲ್ಲಿ ಕುಂಭ ಕರಾವಳಿ ಐತಿಹಾಸಿಕ ಕಾರ್ಯಕ್ರಮದ ಆಯೋಜನೆಗೆ ಸಿದ್ದವಾಗುತ್ತಿದ್ದು, ಈ ಒತ್ತಡದ ಮಧ್ಯೆಯೇ ಜಿಲ್ಲಾಧ್ಯಕ್ಷರು ವೇದಿಕೆಯ ಹಲವು ಪ್ರಮುಖರ ಜೊತೆ ಕನ್ಯಾನಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಅಲ್ಲದೆ ಕುಂಭಕರಾವಳಿಯ ಕಾರ್ಯಕ್ರಮದ ಬಳಿಕ ನಿಮಗೊಂದು ಸೂರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಕುಂಭಕರಾವಳಿ ಕಾರ್ಯಕ್ರಮದ ಬಳಿಕ ಸ್ಥಳೀಯ ಜಾಗವೊಂದನ್ನು ಖರೀದಿಸಿ ಸ್ಥಳೀಯ ಸಂಘಗಳು, ಜಿಲ್ಲಾ ಸಂಘ ಹಾಗೂ ದಾನಿಗಳ ಸಹಕಾರದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಲಾಗಿದೆ. ಇದೀಗ ನಿರ್ಮಾಣವಾಗಿರುವ ವೇದಿಕೆಯ ಬೃಹತ್ ಯೋಜನೆ ಕುಂಭಕುಠೀರ ನಾಳೆ ಹಸ್ತಾಂತರವಾಗಲಿದೆ.
ಸಾಮಾಜಿಕ ಸೇವಾ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ: ಲ. ಅನಿಲ್ದಾಸ್
ಕುಂಭಕರಾವಳಿಯ ಜಿಲ್ಲಾಮಟ್ಟದ ಕಾರ್ಯಕ್ರಮದ ಸಂದರ್ಭ ಕನ್ಯಾನದ ಈ ಬಡಕುಟುಂಬದ ಘಟನೆಯ ಬಗ್ಗೆ ಗಮನಕ್ಕೆ ಬಂದಿದೆ. ಕುಂಭಕರಾವಳಿ ಕಾರ್ಯಕ್ರಮಗಳ ವ್ಯವಸ್ಥೆಯ ಒತ್ತಡದ ಮಧ್ಯೆಯೂ ಕನ್ಯಾನಕ್ಕೆ ಭೇಟಿ ನೀಡಿ ಮನೆಮಂದಿಯೊಂದಿಗೆ ಮಾತನಾಡಿ ಸಮಸ್ಯೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಅಲ್ಲದೆ ಎಲ್ಲರ ಸಹಕಾರದಲ್ಲಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದ್ದೆವು. ಅದರಂತೆ ಇಂದು ಒಂದು ವ್ಯವಸ್ಥಿತ ಕುಂಭ ಕುಠೀರ ಮನೆ ನಿರ್ಮಿಸಲಾಗಿದೆ. ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಸ್ಥಳೀಯ ಹಾಗೂ ತಾಲೂಕು ಸಂಘಗಳು, ಜಿಲ್ಲಾ ಯುವ ವೇದಿಕೆಯ ಪದಾಧಿಕಾರಿಗಳು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೇದಿಕೆ ಪದಾದಿಕಾರಿಗಳು ಹಾಗೂ ಸೂಕ್ತವಾಗಿ ಸ್ಪಂದಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತೇನೆ.
- ಲ. ಅನಿಲ್ದಾಸ್, ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕ
ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ರಾಜ್ಯಕ್ಕೆ ಮಾತ್ರ ಅಲ್ಲ ರಾಷ್ಟ್ರಕ್ಕೆ ಮಾದರಿ; – ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು
ಅತ್ಯಂತ ಸಂಕಷ್ಟದಲ್ಲಿ ಇದ್ದ ಕುಟುಂಬದ ಬೆನ್ನಿಗೆ ನಿಂತು, ಧೈರ್ಯ ತುಂಬಿ, ಸಹಾಯ ಸಹಕಾರದ ಭರವಸೆ ನೀಡಿದಂತೆ ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ಯುವ ವೇದಿಕೆಯ ರಾಜ್ಯ ವಿಭಾಗ ಜಿಲ್ಲಾ ಹಾಗೂ ವಿಧಾನ ಸಭಾ ಘಟಕಗಳ ಸರ್ವ ಪದಾಧಿಕಾರಿಗಳು ಅಭಿನಂದನಾರ್ಹರು. ದೇಶ ವಿದೇಶಗಳ ದಾನಿಗಳು ಊರ ಪರ ಊರ ಹಿತೈಷಿಗಳ ಸಹಕಾರ ಪಡೆಯುವಲ್ಲಿ ಹೆಣಗಿದ ದ ಕ ಜಿಲ್ಲಾ ಘಟಕ ಮತ್ತು ಸಂಪೂರ್ಣ ಜವಾಬ್ದಾರಿ ಹೊತ್ತ ಬಂಟ್ವಾಳ ಯುವ ವೇದಿಕೆ ಯ ಪದಾಧಿಕಾರಿಗಳ ಸೇವೆ, ಅವರಿಗೆ ಸಾಥ್ ನೀಡಿದ ಎಲ್ಲಾ ವಿಧಾನ ಸಭಾ ಘಟಕಗಳ ಸಮಯೋಚಿತ ಸ್ಪಂದನೆ. ಸದ್ದಿಲ್ಲದೇ ದುಡಿದ ಕಾರ್ಯಕರ್ತರು ಹಾಗು ಯುವ ವೇದಿಕೆಯ ಸೇವಾ ಬದ್ಧತೆಗೆ ಮತ್ತೊಂದು ಮೆರುಗು. ಸರ್ವರಿಗೂ ಶುಭವಾಗಲಿ. ಕಳೆದ 17 ವರ್ಷಗಳಲ್ಲಿ ಸದ್ದಿಲ್ಲದೇ ಹತ್ತಾರು ಮನೆ ನಿರ್ಮಾಣ, ನಾಲ್ಕಾರು ಸ್ಮಶಾನ ನಿರ್ಮಾಣ, ಎರಡು ಸರ್ವಜ್ಞ ವೃತ್ತ ನಿರ್ಮಾಣ, ಹಲವಾರು ದೇವಸ್ಥಾನ ಗಳಿಗೆ ಜಾತ್ಯಾತೀತ ನೆಲೆಯಲ್ಲಿ ಶ್ರಮದಾನ , ಆರ್ಥಿಕ ಸಹಾಯ, ಹತ್ತಾರು ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡಿ, ಸಮಾಜ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದಿರುವ ನಿಮ್ಮಿಂದ ಇನ್ನಷ್ಟು ಮತ್ತಷ್ಟು ಸೇವೆ ಬಡವರಿಗೆ ಸಿಗಲಿ. ಯುವ ವೇದಿಕೆಯ ಸೇವೆ ರಾಜ್ಯಕ್ಕೆ ಮಾತ್ರ ಅಲ್ಲ ರಾಷ್ಟ್ರಕ್ಕೆ ಮಾದರಿ ಎಂಬುದೇ ನಮಗೆ ಹೆಮ್ಮೆ
– ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು
ಸ್ಥಾಪಕ ಅಧ್ಯಕ್ಷರು. ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ( ರಿ) ಮಂಗಳೂರು.
ಇದೊಂದು ಬಹುದೊಡ್ಡ ದೇವತಾ ಕಾರ್ಯದಂತೆ: ಹೊನ್ನಯ್ಯ ಕಾಟಿಪಳ್ಳ
ಕರ್ನಾಟಕ ರಾಜ್ಯ ಕುಂಬಾರ/ಕುಲಾಲ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮನಗಂಡು ಈ ಸಂತ್ರಸ್ತ ಕುಟುಂಬಕ್ಕೆ ಆದ ಅನ್ಯಾಯ ಕ್ಕೆ ದೊಂಬಿ ಗಲಾಟೆ ಮಾಡದೆ ಹತ್ತು ಮನಸ್ಸು ಗಳು ಒಟ್ಟಾಗಿ ಅವರಿಗಾದ ಅನ್ಯಾಯ ಶೋಷಣೆಗೆ ಕುಂಬಾರ ಕುಲಾಲ ಸಂಘಟನೆ ಸಂತ್ರಸ್ತ ರಾದ ನಿಮ್ಮ ಹಿಂದೆ ನಾವಿದ್ದೇವೆ ಎಂದು ಧೈರ್ಯ ತುಂಬಿ ಸ್ವಾಭಿಮಾನ ಎಂಬ ಗಿಡಕ್ಕೆ ರಕ್ಷಣೆ ನೀಡಿ ಗೌರವ ನೀಡಿ ವಸತಿ ಯೋಜನೆ ಪೂರ್ಣಗೊಳಿಸಿ ಶೀಘ್ರ ದಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಇಂತಹ ನಿಸ್ವಾರ್ಥ ಸೇವೆಯಲ್ಲಿ ಯಜ್ಞ ಯಾಗಾದಿಗಳಿಂದ ದೇವತೆಗಳ ಸಂತ್ರುಪ್ತಿ ಗೊಳಿಸುವುದಕ್ಕಿಂತ ಅಧಿಕವಾಗಿ ಇದರಿಂದ ಸಿದ್ಧಿಸುತ್ತದೆ. ಈ ವಸತಿಯೋಜನೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ವರಿಗೆ ಎಲ್ಲರಿಗೂ ಭಗವಂತ ಅನುಗ್ರಹಿಸಲಿ.
ಹೊನ್ನಯ್ಯ ಕಾಟಿಪಳ್ಳ–ಶ್ರೀ ಗುರು ಚೈತನ್ಯ



