ಕಾಪು: ಸ್ನೇಹಕ್ಕಾಗಿ ಕ್ರೀಡೆ, ಏಳಿಗೆಗಾಗಿ ಕ್ರೀಡೆ, ಒಗ್ಗಟ್ಟಿಗಾಗಿ ಕ್ರೀಡೆ ಎಂಬ ನಿಟ್ಟಿನಲ್ಲಿ ತಾಲೂಕಿನ ಕುಲಾಲ ಸಂಘ(ರಿ)ಕಾಪು ವಲಯ ಹಾಗೂ ಮಹಿಳಾ ಘಟಕ, ಕಾಪು ಕುಲಾಲ ಯುವ ವೇದಿಕೆ ನೇತೃತ್ವದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಲಾಲ ಸಮಾಜ ಬಾಂಧವರ ಕುಲಾಲ ಕ್ರೀಡೋತ್ಸವ ಜ. 25 ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ನಡೆಯಲಿದೆ..
ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ 100 ಮೀ ಓಟ,ಗುಂಡು ಎಸೆತ,ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಆಯಾಯ ಸ್ಪರ್ಧೆಗೆ ನಗದು ಜೊತೆಗೆ ಕುಲಾಲ ಶಾಶ್ವತ ಫಲಕ ಡಲಾಗುವುದು ಎಂದು ಕಾಪು ಕುಲಾಲ ಸಂಘದ ಅಧ್ಯಕ್ಷರು,,ಪ್ರಸ್ತುತ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು ಹರೀಶ್ ಮೂಲ್ಯ ಬೆಳ್ಳಿಬೆಟ್ಟು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು 9686122892, 9964194509, 9686945501.
ಮಾಹಿತಿ ಕೃಪೆ : ಉದಯ ಕುಲಾಲ್ ಕಳತ್ತೂರು






